ಪ್ರವಾದಿ [ಸ] ನಮಾಝ್ ಪ್ರಾರಂಭಿಸುವ ಮೊದಲು ಜನರ ಕಡೆಗೆ ತಿರುಗಿ ಹೀಗೆ
ಹೇಳುತ್ತಿದ್ದರು: ಪರಸ್ಪರ ಸೇರಿಕೊಂಡು ನೇರವಾಗಿ ನಿಂತುಕೊಳ್ಳಿರಿ
[ಸಹೀಹ್ ಬುಖಾರಿ, ಸಹೀಹ್ ಮುಸ್ಲಿಮ್]
ಮತ್ತು ಹೇಳಿದರು
ನಿಮ್ಮ ಪಂಕ್ತಿಗಳನ್ನೂ ನೇರವಾಗಿಡಿರಿ. ನಮಾಝಿನ ಪೂರ್ತಿಕರಣದಲ್ಲಿ ಪಂಕ್ತಿಗಳನ್ನು
ಸರಿಪಡಿಸುವುದು ಸೇರಿದೆ.
[ಸಹೀಹ್ ಬುಖಾರಿ, ಸಹೀಹ್ ಮುಸ್ಲಿಮ್]
ಪ್ರವಾದಿ [ಸ] ಇನ್ನೊಂದು ವಚನದಲ್ಲಿ ಹೀಗಿದೆ:
ನೀವು ನಿಮ್ಮ ಪಂಕ್ತಿಗಳನ್ನು ಸರಿಪಡಿಸಿರಿ ಅನ್ಯಥಾ ಅಲ್ಲಾಹನು ನಿಮ್ಮ ಮಧ್ಯೆ
ಭಿನ್ನತೆಗಳನ್ನು ಹಾಕಿಬಿಡುವನು.
[ಸುನನು ತಿರ್ಮಿಸಿ ವ
ಹಸನ]
ಮುಂದುವರಿಸುತ್ತಾ ಹೇಳಿದರು:
ಪಂಕ್ತಿಯನ್ನು ಪೂರ್ತಿಗೊಳಿಸಲು ಮುಂದಿಡುವ ಹೆಜ್ಜೆಗಿಂತ ಪುಣ್ಯಕರವಾದ ಹಜ್ಜೆ
ಬೇರೊಂದಿಲ್ಲ.
[ರವಾಹುಲ್ ಬುಝಾರ್]
No comments:
Post a Comment