ಪ್ರತಿಯೊಬ್ಬ ಪ್ರೌಢ ಮತ್ತು ಬುದ್ದಿ ಇರುವ ಪುರುಷರಿಗೆ ಜುಮಾಅದ ನಮಾಝನ್ನು ಜಮಾತಿನೊಂದಿಗೆ ನಿರ್ವಹಿಸುವುದು ಕಡ್ಡಾಯವಾಗಿದೆ.
ಜುಮಾದ ದಿನ ಸ್ನಾನ ಮಾಡಿ ಶುದ್ದವಾದ, ಶುಭ್ರವಾದ ಬಟ್ಟೆಯನ್ನು ಧರಿಸಿ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಮಸೀದಿಗೆ ಹೋಗಿರಿ.
[ಬುಖಾರಿ]
ಜುಮಾದ ದಿನ ಖುತ್ಬಾ ಆರಂಭವಾಗುವುದಕ್ಕಿಂತ ಮೊದಲು
ಮಸೀದಿ ತಲುಪುವುದು ಅತ್ಯಂತ ಪುಣ್ಯ ಕಾರ್ಯವಾಗಿದೆ. [ಬುಖಾರಿ, ಮುಸ್ಲಿಮ್]
ಮಸೀದಿಗೆ ಪ್ರವೇಶಿಸಿದ ತಕ್ಷಣ ಎರಡು ರಕಅತ್ ತಹಿಯತುಲ್
ಮಸ್ಜಿದ್ ನಮಾಝ್ ನಿರ್ವಹಿಸಿರಿ. ಒಂದೊಮ್ಮೆ ಖುತ್ಬಾ ಪ್ರಾರಂಭವಾಗಿದ್ದರೂ ಕೂಡಾ [ಮುಸ್ಲಿಮ್]
ಖುತ್ಬಾ ಪ್ರಾರಂಭವಾದ ನಂತರ ಮಾತಾಡುವುದಾಗಲೀ, ಸಂಕೇತ
ಮಾಡುವುದಾಗಲೀ ಮಾಡಬೇಡಿರಿ. [ಬುಖಾರಿ, ಮುಸ್ಲಿಮ್]
ಜನರ ಹೆಗಳನ್ನು ದಾಟಿಕೊಂಡು ಮುಂದೆ ಹೋಗಲು
ಪ್ರಯತ್ನಿಸಬೇಡಿರಿ. [ಬುಖಾರಿ]
ಯಾವುದಾದರೂ ಶರಈ ಕಾರಣದಿಂದ ಜುಮ್'ಆ
ನಮಾಝ್ ತಪ್ಪಿ ಹೋದರೆ ಝುಹರ್ ನಮಾಝ್ ನಿರ್ವಹಿಸಿರಿ.
ಜುಮ್'ಆದ ದಿನ ಸೂರತುಲ್ ಕಹ್ಫ್
ಓದುವುದಕ್ಕೆ ಹಚ್ಚಿನ ಮಹತ್ವವಿದೆ. [ಅಬೂ ದಾವೂದ್]
ಜುಮ್'ಆದ ದಿನ ಪ್ರವಾದಿ [ಸ]ರ ಮೇಲೆ
ನಿರಂತರ ಸ್ವಲಾತ್ [ದುರೂದ್ ಶರೀಫ್] ಹೇಳಬೇಕು. [ಅಬೂ ದಾವೂದ್]
ಸಲಾತಿನ ಪದಗಳು ಸಲಾತೆ ಇಬ್ರಾಹಿಮ್'ನಲ್ಲಿ
ಒಳಪಡುವುದಾಗಿದೆ. [ಅಬೂ ದಾವೂದ್]
ಮತ್ತು ಸಂಕ್ಷಿಪ್ತವಾಗಿ [ಸಲ್ಲಾ ಲ್ಲಾಹು ಅಲೈಹಿ
ವಸಲ್ಲಮ್] ಎಂದಾಗಿದೆ. ಜುಮ್'ಆದ
ದಿನ ಪ್ರವಾದಿ [ಸ]ರ ಮೇಲೆ ನಿರಂತರ ಸ್ವಲಾತ್ [ದುರೂದ್ ಶರೀಫ್] ಹೇಳಬೇಕು.
[ಅಬೂ ದಾವೂದ್]
No comments:
Post a Comment