ಕೈಗಳನ್ನು ಮೊದಲು ನೆಲದಲ್ಲಿ ಉರುತ್ತಾ ಸುಜೂದ್ ನಿರ್ವಹಿಸಬೇಕು.
[ಇಬ್ನ್ ಖುಝೈಮ, ಅಬೂ
ದಾವೂದ್]
ಏಳು ಅವಯವಗಳಿಂದ ಸುಜೂದ್ ನಿರ್ವಹಿಸಬೇಕು [ಬುಖಾರಿ]
1. ಹಣೆ
ಮತ್ತು ಮೂಗು (2, 3) ಎರಡು ಅಂಗೈಗಳು (4, 5) ಎರಡು ಮೊಣಕಾಲುಗಳು (6, 7) ಎರಡು ಪಾದಗಳ ತುದಿ.
ಎರಡು ಅಂಗೈಗಳನ್ನು ತೆರೆದು ಬೆರಳುಗಳನ್ನು ಸೇರಿಸಿ
ಕಿಬ್ಲಾಭಿಮುಖವಾಗಿ ನೆಲದಲ್ಲಿ ಊರಬೆಕು. [ಅಬೂ ದಾವೂದ್, ಹಾಕಿಮ್]
ಎರಡು ಅಂಗೈಗಳನ್ನು ಭುಜ ಅಥವಾ ಕಿವಿಗಳ ನೇರಕ್ಕೆ
ನೆಲದಲ್ಲಿಡಬೇಕು.
[ಅಬೂ
ದಾವೂದ್, ತಿರ್ಮಿದಿ]
ಬೆನ್ನು ನೇರವಾಗಿರಬೇಕು ಬಾಗಿಕೊಂಡಿರಬಾರದು.
[ಅಬೂ
ದಾವೂದ್]
ಪಾದಗಳನ್ನು ನೆಲಕ್ಕೆ ಚುಚ್ಚಿ ನಿಲ್ಲಿಸಬೇಕು.
[ಮುಸ್ಲಿಮ್]
ಎರಡು ಪಾದಗಳನ್ನು ಪರಸ್ಪರ ಜೋಡಿಸಿಡಬೇಕು.
[ಇಬ್ನ್
ಖಝೈಮ]
ಕಾಲಿನ ಬೆರಳುಗಳನ್ನು ಮಡಚಿ
"ಕಿಬ್ಲ"ದೆಡೆಗೆ ತಿರುಗಿಸಿಕೊಳ್ಳಬೇಕು.
[ಬುಖಾರಿ]
No comments:
Post a Comment