ನಮಾಝ್ಗೆ ಸಜ್ಜುಗೊಳಿಸಲಾದ ಜಾಗದಲ್ಲಿ ಎಲ್ಲರೂ ಸೇರಿ ಇಮಾಮರ ಹಿಂದೆ ನಿಂತು ಜಮಾಅತಾಗಿ ಎರಡು ರಕಅತ್ ನಮಾಝ್ ನಿರ್ವಹಿಸಬೇಕು. ಬಳಿಕ ಇಮಾಮ್ ಪ್ರವಚನ (ಖುತುಬಾ ನೀಡಬೇಕು).
ಈದ್ ನಮಾಝನ್ನು ತೆರೆದ ಮೈದಾನದಲ್ಲಿ
ನಿರ್ವಹಿಸಬೇಕು. [ಬುಖಾರಿ]. ಈದ್ ನಮಾಝ್'ಗಿಂತ ಮೊದಲು ಯಾವುದೇ
ಸುನ್ನತ್ ಅಥವಾ ನಫಿಲ್ ನಮಾಝ್ ಇರುವುದಿಲ್ಲ. [ಬುಖಾರಿ]
ಈದ್ ನಮಾಝಿನಲ್ಲಿ ಎರಡು ರಕಅತ್'ಗಳು
ಮತ್ತು ಹನ್ನೆರಡು ಹೆಚ್ಚುವರಿ ತಕ್ಬೀರ್'ಗಳು ಇರುತ್ತದೆ. ಮೊದಲ ರಕಅತ್'ನಲ್ಲಿ ತಕ್ಬೀರ್
ತಹ್ರಿಮಾದ ನಂತರ ಏಳು ಹೆಚ್ಚುವರಿ ತಕ್ಬೀರ್'ಗಳು ಹೇಳಬೇಕು.
ಎರಡನೇ ರಕಅತ್'ನಲ್ಲಿ ಕೂಡಾ ಐದು
ತಕ್ಬೀರ್'ಗಳನ್ನು ಹೆಚ್ಚುವರಿಯಾಗಿ ಹೇಳಬೇಕು. [ಅಬೂ ದಾವೂದ್]. ನಮಾಝಿನ ನಂತರ ಈದ್'ನ ಖುತ್ಬಾ ಆಲಿಸಬೇಕು. ತಕ್ಬೀರ್ಗಳ ಬಳಿಕ ಎರಡೂ ರಕಅತ್ಗಳಲ್ಲೂ
ಸೂರಃ ಫಾತಿಹಾ ಒದಬೇಕು. ಸೂರಃ ಫಾತಿಹಾದ ಬಳಿಕ ಇಮಾಮ್ (ಮೊದಲ ರಕಅತ್ನಲ್ಲಿ) ಸೂರ ಅಲ್ ಕಮರ್ ಮತ್ತು
ಎರಡನೇ ರಕಅತ್ನಲ್ಲಿ ಸೂರ ಕಾಫ್ ಅಥವಾ ಮೊದಲ ರಕಅತ್ನಲ್ಲಿ ಸೂರ ಅಲ್’ಅಹ್ಲಾ ಎರಡನೇ ರಕಅತ್ನಲ್ಲಿ
ಸೂರ ಅಲ್ ಘಾಷಿಯಾ ಒದುವುದು ಸುನ್ನತ್ ಆಗಿದೆ.
ಈದ್ಗಾಕ್ಕೆ ಹೋಗುವಾಗ ಒಂದು ರಸ್ತೆಯನ್ನು
ಬರುವಾಗ ಇನ್ನೊಂದು ರಸ್ತೆಯನ್ನು ಆಯ್ದುಕೊಳ್ಳಿರಿ. [ಬುಖಾರಿ]
ಈದ್ಗಾಹ್'ಕ್ಕೆ ಹೋಗುವಾಗ ಎತ್ತರದ ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಇರಬೇಕು. [ಇಬ್ನು ಅಬೀ ಶೈಬಾ]
ಈದ್ಗಾದಲ್ಲಿ ಸ್ತ್ರೀಯರು ಕೂಡಾ
ನಮಾಝಿನಲ್ಲಿ ಭಾಗವಹಿಸಬೇಕು. [ಬುಖಾರಿ]. ನಮಾಝ್ ಕಡ್ಡಾಯವಲ್ಲದ ಅಶುದ್ದಿಯುಳ್ಳ
ಮಹಿಳೆಯರು ನಮಾಝ್ನಲ್ಲಿ ಪಾಲ್ಗೊಳ್ಳದೆ ಖತ್ಬಾ ಆಲಿಸುವುದು, ತಕ್ಬೀರ್, ದುಆ ಮೊದಲಾದ ಪುಣ್ಯ ಕರ್ಮಗಳಲ್ಲಿ
ಪಾಲ್ಗೊಳ್ಳಬಹುದಾಗಿದೆ.
No comments:
Post a Comment