Friday, February 7, 2014

ಪ್ರತಿಯೊಬ್ಬನೂ ಮೇಲ್ವಿಚಾರಕನು


ಪ್ರವಾದಿ(ಸ) ಹೇಳಿರುವರು: "ಕೇಳಿರಿ! ನಿಮ್ಮ ಪೈಕಿ ಪ್ರತಿಯೊಬ್ಬನೂ ಮೇಲ್ವಿಚಾರಕನು. ಪ್ರತಿಯೊಬ್ಬನೊಡನೆ ಅವನ ಅಧೀನದಲ್ಲಿರುವವರ ಕುರಿತು ವಿಚಾರಣೆ ನಡೆಸಲಾಗುವುದು. ಜನರ ಮುಂದಾಳುವಾಗಿರುವ ಇಮಾಮ್ (ನಾಯಕ) ಮೇಲ್ವಿಚಾರಕನಾಗಿದ್ದಾನೆ. ಅವನೊಡನೆ ಅವನ ಅಧೀನವಿದ್ದ ಜನರ ಬಗ್ಗೆ ಪ್ರಶ್ನಿಸಲಾಗುವುದು. ವ್ಯಕ್ತಿಯು ಅವನ ಮನೆಯವರ ಮೇಲ್ವಿಚಾರಕನಾಗಿದ್ದಾನೆ. ಅವನು ಅವರ ವಿಷಯದಲ್ಲಿ ವಿಚಾರಣಾರ್ಹನಾಗಿರುವನು. ಸ್ತ್ರೀಯು ತನ್ನ ಪತಿಯ ಮನೆ ಮತ್ತು ಅವನ ಮಕ್ಕಳ ಮೇಲ್ವಿಚಾರಕಳಾಗಿರುವಳು. ಅವಳೊಡನೆ ಅವುಗಳ ಬಗ್ಗೆ ವಿಚಾರಣೆ ನಡೆಸಲಾಗುವುದು. ಗುಲಾಮನು ತನ್ನ ಮಾಲಕನ ಸೊತ್ತುಗಳ ಮೇಲ್ವಿಚಾರಕನಾಗಿರುತ್ತಾನೆ. ಅವನೊಡನೆ ಆ ಕುರಿತು ವಿಚಾರಿಸಲಾಗುವುದು. ತಿಳಿದಿರಲಿ! ನಿಮ್ಮ ಪೈಕಿ ಪ್ರತಿಯೊಬ್ಬನೂ ಮೇಲ್ವಿಚಾರಕನಾಗಿರುವನು ಮತ್ತು ಪ್ರತಿಯೊಬ್ಬನೊಡನೆಯೂ ಅವನ ಹೊಣೆಗಾರಿಕೆಗಳ ಬಗ್ಗೆ ವಿಚಾರಣೆ ನಡೆಯಲಿದೆ.

[ಹ.ಅಬ್ದುಲ್ಲಾ ಬಿನ್ ಉಮರ್ (ರ)]

No comments:

Post a Comment