Thursday, February 27, 2014

ತಅವ್ವುದ್



ನೀವು ಕುರಾನ್ ಓದಿದರೆ (ಓದಬಯಸಿದರೆ) ಶಪಿಸಲ್ಪಟ್ಟ ಶೈತಾನನಿಂದ ಅಲ್ಲಾಹನೊಂದಿಗೆ ಅಭಯವನ್ನು ಯಾಚಿಸು.
[ಕುರಾನ್, ಸೂರ ನಹಲ್ 98]

ಮತ್ತು ಹೇಳು: ನನ್ನ ಪ್ರಭೂ, ನಾನು ನಿನ್ನೊಂದಿಗೆ ಶೈತಾನ್ ಗಳ ದುರ್ಭೋಧನೆಗಳಿಂದ ಅಭಯವನ್ನು ಯಾಚಿಸುತ್ತಿದ್ದೇನೆ. ಮತ್ತು ನನ್ನ ಪ್ರಭೂ, ಅವರು ನನ್ನ ಬಳಿ ಹಾಜರಾಗುವುದರಿಂದಲೂ ನಾನು ನಿನ್ನೊಂದಿಗೆ ಅಭಯವನ್ನು ಯಾಚಿಸುತ್ತಿದ್ದೇನೆ.
[ಕುರಾನ್, ಸೂರ ಮುಹ್ ಮಿನೂನ್: 97-98]


ತಅವ್ವುದ್ ಮಾಡುವ ರೀತಿಗಳು:-

[ಅಊದು ಬಿಲ್ಲಾಹಿ ಮಿನ ಶೈತಾನಿ  ಮಿನ್ ನಫ್ ಖಿಹೀ ವನಫ್ಸಿಹೀ  ವಹಮ್ ಝಿಹ್]
ಶೈತಾನನಿಂದ ಅವನ  ನಫ್ಖ್ ನಿಂದ, ಅವನ ನಫ್ಖ್ ನಿಂದ ಮತ್ತು ಅವನ ಹಮ್ಝ್ ನಿಂದ ನಾನು ಅಲ್ಲಾಹನೊಂದಿಗೆ ಅಭಯವನ್ನು ಯಾಚಿಸುತ್ತೇನೆ.
[ವರದಿ: ಜುಬೈರ್ ಇಬ್ನು ಮುತ್ ಇಮ್]
[ಅಬೂ ದಾವೂದ್]

[ಅಊದು ಬಿಲ್ಲಾಹಿ ಸ್ಸಮೀಇಲ್ ಅಲೀಮಿ ಮಿನ ಶೈತಾನಿ ರಜೀಮಿ ಮಿನ್ ಹಮ್ ಝಿಹೀ ವನಫ್ ಖಿಹೀ ವನಫ್ಸಿಹ್]

ಶಪಿಸಲ್ಪಟ್ಟ ಶೈತಾನನಿಂದ, ಅವನ ಹಮ್ಝ್ ನಿಂದ, ಅವನ  ನಫ್ಖ್ ನಿಂದ ಮತ್ತು ಅವನ ನಫ್ಖ್ ನಿಂದ ನಾನು ಅಲ್ಲಾಹನೊಂದಿಗೆ ಅಭಯವನ್ನು ಯಾಚಿಸುತ್ತೇನೆ.
[ವರದಿ: ಅಬೂ ಸಈದ್ ಅಲ್ ಖುದ್ರೀ] 
[ಅಬೂ ದಾವೂದ್]

No comments:

Post a Comment