Wednesday, February 5, 2014

ಸಹ್'ವಿನ [ಮರೆವಿನ] ಸುಜೂದ್



ಸಹ್'ವಿನ ಅರ್ಥ ಮರೆಯುವುದು ಎಂದಾಗಿದೆ. ಸಹ್'ವಿನ [ಮರೆವಿಗೆ] ಎರಡು ಸುಜೂದ್'ಗಳಿರುತ್ತದೆ.

ಮರೆವಿನ ಸುಜೂದ್ ಮೂರು ಕಾರಣಕ್ಕೆ ನಿರ್ವಹಿಸಲಾಗುತ್ತದೆ:-

   1.    ರಕಅತಿನ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾದಾಗ [ಕಡಿಮೆಯಾಗಿದ್ದನ್ನು ಪೂರ್ತಿಗೊಳಿಸಿದ ನಂತರ]. [ಬುಖಾರಿ, ಮುಸ್ಲಿಮ್]

   2.   ಪ್ರಥಮ ತಹಹುದ್ದ್'ನಲ್ಲಿ ಕುಳಿತುಕೊಳ್ಳುವುದು ಅಥವಾ ಯಾವುದಾದರೂ ಕಡ್ಡಾಯ ಕಾರ್ಯವನ್ನು ಮರೆತಾಗ ನಿರ್ವಹಿಸಲಾಗುತ್ತದೆ.

   3.   ಸಂಶಯ ಉಂಟಾದಾಗ [ದ್ರಢ ವಿರುವುದನ್ನು ಅವಲಂಭಿಸಿ ನಮಾಝ್ ಪೂರ್ತಿಗೊಳಿಸಿದ ನಂತರ] [ಬುಖಾರಿ, ಮುಸ್ಲಿಮ್]

ಮರೆವಿನ ಸುಜೂದ್ ಸಲಾಮ್ ಹೇಳುವ ಮೊದಲು ಅಥವಾ ನಂತರ ನಿರ್ವಹಿಸಬಹುದು.

ಸಲಾಮ್ ಹೇಳಿದ ನಂತರ ಮರೆವಿನ ಸುಜೂದ್ ನಿರ್ವಹಿಸಿದರೆ ಬಳಿಕ ಮತ್ತೊಮ್ಮೆ ಸಲಾಮ್ ಹೇಳಬೇಕಾಗುತ್ತದೆ. [ಬುಖಾರಿ, ಮುಸ್ಲಿಮ್]

ಮರೆವಿನ ಸುಜೂದ್'ನಲ್ಲಿ ಕೂಡಾ ಸುಜೂದ್'ನಲ್ಲಿ ಹೇಳುವ ದುಃಆವನ್ನೇ ಪಟಿಸಿರಿ.

ಖಿರಾಹತ್ ಮರೆತರೆ ಮರೆವಿನ ಸುಜೂದ್ ಇರುವುದಿಲ್ಲ.

ಇಮಾಮರ ಮರೆವಿಗೆ ಸುಜೂದ್ ಇದೆ. ಮುಕ್ತದಿಯ ಮರೆವಿಗೆ ಮರೆವಿನ ಸುಜೂದ್ ಇರುವುದಿಲ್ಲ.

No comments:

Post a Comment