Thursday, February 6, 2014

ಪ್ರವಾದಿವರ್ಯರ [ಸ] ಶಿಫಾರಸ್ಸು


ಪರಲೋಕದಲ್ಲೂ ಪ್ರವಾದಿ [ಸ] ರಿಗೆ ಅಲ್ಲಾಹನು ಎಲ್ಲಾ ಸ್ರಷ್ಟಿಗಳಗಿಂತಲೂ ಶ್ರೇಷ್ಠತೆ ದಯಪಾಲಿಸಿರುವರು. ಇತರ ಎಲ್ಲಾ ಪ್ರವಾದಿಗಿಂತಲೂ ಪ್ರವಾದಿ ಮುಹಮ್ಮದ್ [ಸ]ರೇ ಹೆಚ್ಚು ಅನುಯಾಯಿಗಳನ್ನು ಹೊಂದಿರುವರು. ಇತರ ಸಮುದಾಯಗಳಿಂದ ಪ್ರತ್ಯೇಕ ಗುರುತಿಸಲಿಕ್ಕಾಗಿ ವುಝೂವಿನ ಪ್ರತಿಫಲವೆಂಬ ನೆಲೆಯಲ್ಲಿ ಅವರ ಸಮುದಾಯದವರ ಹಣೆಗಳು ಕಾಂತಿಯುಕ್ತವಾಗಿರುವುವು. ಕೈಕಾಲುಗಳು ಪ್ರಕಾಶಮಯವಾಗಿರುವುವು.

ಪರಲೋಕದಲ್ಲಿ ಭಯಾನಕ ವಿಚಾರಣೆ ಮೈದಾನದಲ್ಲಿ ಎಲ್ಲಾ ಜನರು ಸಂಕಷ್ಟ ಅನುಭವಿಸುತ್ತಿರುವಾಗ ವಿಚಾರಣೆ ನಡೆಸಿ ತಿರ್ಮಾನ ಮಾಡಲು ಎಲ್ಲಾ ಜನರ ಪರವಾಗಿ ಮುಹಮ್ಮದ್ [ಸ] ಶಿಫಾರಸ್ಸು ಮಾಡುವರು. ಹದೀಸ್ ಗ್ರಂಥಗಳಲ್ಲಿ ತಿಳಿಯುವಂತೆ ಎಲ್ಲಾ ಜನರು ಪ್ರಥಮವಾಗಿ ಆದಮ್ [ಅ], ಅನಂತರ ನೂಹ್ [ಅ], ಇಬ್ರಾಹೀಮ್ [ಅ], ಮೂಸಾ [ಅ] ಮತ್ತು ಈಸಾ [ಅ] ರೊಂದಿಗೆ ವಿಚಾರಣೆ ನಡೆಸಲು. ಶಿಫಾರಸ್ಸು ಮಾಡಲು ಕೇಳಿಕೊಳ್ಳುವರು. ಅವರೆಲ್ಲರೂ ಅಂದು ತಮ್ಮದೇ ಚಿಂತೆಯಲ್ಲಿರುವರು. 

ಕೊನೆಯ ಪ್ರವಾದಿ ಮುಹಮ್ಮದ್ [ಸ]ರ ಬಳಿ ಹೋಗಿ ಈ ರೀತಿ ಹೇಳುವರು: ಹೇ ಮುಹಮ್ಮದರೇ, ನೀವು ಅಲ್ಲಾಹನ ಅಂತ್ಯ ಪ್ರವಾದಿಯಾಗಿದ್ದೀರಿ. ಆತನು ನಿಮ್ಮ ಮುಂದಿನ ಮತ್ತು ಹಿಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಿ ಬಿಟ್ಟಿದ್ದಾನೆ. ನಮಗಾಗಿ ಒಮ್ಮೆ ಶಿಫಾರಸ್ಸು ಮಾಡಿ... ಆಗ ಪ್ರವಾದಿ [ಸ] ದಿವ್ಯ ಸಿಂಹಾಸನದ ಬಳಿ ಹೋಗಿ ಸಾಷ್ಟಾಂಗವೆರಗುವರು. ಈ ತನಕ ಯಾರಿಗೂ ದೊರೆತಿಲ್ಲದಂತಹ ಒಂದು ವಿಶೇಷ ವಿಧಾನವನ್ನು ಅವರಿಗೆ ತೋರಿಸಿಕೊಡಲಾಗುವುದು. ಅನಂತರ ಪ್ರವಾದಿ [ಸ] ರಿಗೆ ಶಿಫಾರಸ್ಸು ಮಾಡುವ ಅನುಮತಿ ಅಲ್ಲಾಹನು ನೀಡುವನು.     

No comments:

Post a Comment