Thursday, February 6, 2014

ಲೋಕಾನುಗ್ರಾಹಿ ಪ್ರವಾದಿ ಮುಹಮ್ಮದ್ [ಸ]


ಮುಹಮ್ಮದ್ [ಸ]ರ ಹೆಸರನ್ನು ಅಲ್ಲಾಹು ಕಲಿಮ ಶಹಾದದ ಭಾಗವನ್ನಾಗಿ ಮಾಡಿದನು.
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದು ರಸೂಲುಲ್ಲಾಹ್ [ಅಲ್ಲಾಹನ ಹೊರತು ಅನ್ಯ ದೇವನಿಲ್ಲ. ಮುಹಮ್ಮದ್ [ಸ] ಅಲ್ಲಾಹನ ಪ್ರವಾದಿಯಾಗಿದ್ದಾರೆ].
ಲೆಕ್ಕವಿಲ್ಲದಷ್ಟು ಮುಸ್ಲಿಮರು ದಿನಂಪ್ರತಿ ಇದನ್ನು ಪಟಿಸುತ್ತಿರುತ್ತಾರೆ. ಮಾತ್ರವಲ್ಲದೆ ಯಾವುದೇ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಾದರೆ ಈ ವಚನವನ್ನು ಪಟಿಸುವುದು ಕಡ್ಡಾಯವಾಗಿದೆ.

ಖಂಡಿತವಾಗಿಯೂ ಅಲ್ಲಾಹ್ ಮತ್ತು ಅವನ ಮಲಕ್‌ಗಳು, ಪ್ರವಾದಿವರ್ಯರಿಗೆ ಶುಭ ಹಾರೈಸುತ್ತಿರುತ್ತಾರೆ. ವಿಶ್ವಾಸಿಗಳೇ, ನೀವೂ ಅವರಿಗೆ ಶುಭ ಹಾರೈಸಿರಿ ಹಾಗೂ ಶಾಂತಿಯನ್ನು ಕೋರಿರಿ.
[ಕುರಾನ್, 33: 56]

ಇಂದಿಗೂ ಮುಹಮ್ಮದ್ [ಸ] ಎಂಬ ಹೆಸರು ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ದ ಪಡೆದ ಹೆಸರಾಗಿದೆ. ಎಲ್ಲಾ ಕಾಲದಲ್ಲೂ ಮುಸ್ಲಿಮರು ಹೆಸರಿನ ಆರಂಭದಲ್ಲಿ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ತಮ್ಮ ಹೆಸರಿನೊಂದಿಗೆ ಮುಹಮ್ಮದ್ ಎಂಬ ಹೆಸರನ್ನು ಸೇರಿಸುವುದು. ಅಲ್ಲಾಹನ ಪ್ರವಾದಿ ಮುಹಮ್ಮದ್ [ಸ]ರಿಗೆ ಮಾತ್ರ ನೀಡುವ ಅದ್ವಿತೀಯ ಗೌರವದ ಸಂಕೇತವಾಗಿದೆ. ಮಿಲಿಯಾಂತರ ಮುಸ್ಲಿಮರು ಪ್ರತಿಯೊಂದು ತಲೆಮಾರಿನಲ್ಲೂ ಇದನ್ನು ಅನುಸರಿಸುತ್ತಾ ಬಂದಿದ್ದಾರೆ.

No comments:

Post a Comment