ಇಸ್ಲಾಮ್ ಒಂದು ಹೊಸ ಧರ್ಮವಲ್ಲ. ಬದಲಾಗಿ ಅದು ಸಕಲ
ಪ್ರವಾದಿಗಳಿಗೂ ದೇವನು ಅವತೀರ್ಣಗೊಳಿಸಿದ ಸಂದೇಶವೇ ಆಗಿದೆ. ಓ ಪೈಗಂಬರರೇ, ಹೇಳಿರಿ-”ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ.
ನಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಇಬ್ರಾಹೀಮ್,
ಇಸ್ಮಾಈಲ್, ಇಸ್ಹಾಕ್, ಯಅಕೂಬ್
ಮತ್ತು ಯಅಕೂಬರ ಸಂತತಿಗಳ ಮೇಲೆ ಅವತೀರ್ಣಗೊಳಿಸಲ್ಪಟ್ಟ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ.
ಮುಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ಕಡೆಯಿಂದ
ನೀಡಲ್ಪಟ್ಟವುಗಳ ಮೇಲೂ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ಭೇದವೆಣಿಸುವುದಿಲ್ಲ. ಮತ್ತು
ನಾವು ಅಲ್ಲಾಹನ ಆಜ್ಞಾಪಾಲಕ (ಮುಸ್ಲಿಮ್) ಆಗಿರುತ್ತೇವೆ“
[ಪವಿತ್ರ ಕುರ್ಆನ್, 3: 84]
No comments:
Post a Comment