1. ಮನಸ್ಸಿನಲ್ಲಿ ವುಝೂವಿನ ಸಂಕಲ್ಪ ಮಾಡಿರಿ. [ಬುಖಾರಿ]
2. ವುಝೂ
ಪ್ರಾರಂಭಿಸುವ ಮೊದಲು ಬಿಸ್ಮಿಲ್ಲಾಹ್ ಹೇಳಿರಿ. [ಅಬೂ ದಾವೂದ್]
3. ಎರಡು
ಮುಂಗೈಗಳನ್ನು ಮೂರು ಸಲ ತೊಳೆಯಿರಿ. [ಅಬೂ ದಾವೂದ್]
4. ಬಲಕೈಯಲ್ಲಿ
ಒಂದು ಮುಷ್ಠಿ ನೀರು ತೆಗೆದುಕೊಂಡು ಅರ್ದಾಂಶದಿಂದ ಬಾಯಿ ಮುಕ್ಕಳಿಸಿರಿ. ಇನ್ನರ್ದಾಂಶವನ್ನು
ಮೂಗಿನೊಳಗೆ ಎಳೆದುಕೊಳ್ಳಿರಿ. (ಮೂರು ಸಲ). [ಬುಖಾರಿ]
5. ಮೂರು
ಸಲ ಮುಖ ತೊಳೆಯಿರಿ ಮತ್ತು ದಾಡಿ ಶುಚಿಗೊಳಿಸಿರಿ. [ಬುಖಾರಿ]
6. ಬಲ
ಕೈಯನ್ನು ಮೊಣಕ್ಕೆ ಗಂಟಿನ ಸಮೇತ ಮೂರು ಸಲ ತೊಳೆಯಿರಿ. [ಬುಖಾರಿ]
7. ಎಡಕೈಯನ್ನು
ಮೊಣಕ್ಕೆ ಗಂಟಿನ ಸಮೇತ ಮೂರು ಸಲ ತೊಳೆಯಿರಿ. [ಬುಖಾರಿ]
8. ಎರಡೂ
ಅಂಗೈಗಳನ್ನು ನೀರಿನಿಂದ ಒದ್ದೆ ಮಾಡಿಕೊಂಡು ಸಂಪೂರ್ಣ ತಲೆಯನ್ನು ಸವರಬೇಕು. (ಎರಡೂ ಅಂಗೈಗಳನ್ನು
ಹಣೆಯಿಂದ ಕತ್ತಿನ ಹಿಂಬಾಗದ ತನಕ ಕೊಂಡೊಯ್ದು ಅಲ್ಲಿಂದ ಅದೇ ಪ್ರಕಾರ ಹಣೆ ತನಕ ಮರಳಿಸಬೇಕು) ಒಂದೇ
ಸಲ. [ಬುಖಾರಿ]
9. ಒಂದು
ಸಲ ಕಿವಿಗಳ ಒಳಗೆ ಮತ್ತು ಹೊರಗೆ ಸವರಬೇಕು. [ತಿರ್ಮಿದಿ,
ನಸಾಈ]
10. ಬಲ
ಕಾಲಿನ ಹರಡನ್ನು ಗಂಟಿನ ಸಮೇತ ಮೂರು ಸಲ ತೊಳೆಯಬೇಕು. [ಬುಖಾರಿ]
11. ಎಡ
ಕಾಲಿನ ಹರಡನ್ನು ಗಂಟಿನ ಸಮೇತ ಮೂರು ಸಲ ತೊಳೆಯಬೇಕು. [ಬುಖಾರಿ]
ಸೂಚನೆ: ಕೈಕಾಲುಗಳನ್ನು ತೊಳೆಯುವಾಗ ಬೆರಳುಗಳ ಮಧ್ಯೆ ಬೇರಳೋಡಿಸಿ ಶುದ್ದೀಕರಿಸಬೇಕು.
No comments:
Post a Comment