ವಿಶ್ವಾಸ ಕಾರ್ಯಗಳು, ನಿಯಮ ನಿರ್ಧೇಶನಗಳು, ಆರಾಧನಾ ಕರ್ಮಗಳು ಎಂಬಿತ್ಯಾದಿ
ಅಡಗಿರುವ ಒಂದು ಧರ್ಮವೇ ಇಸ್ಲಾಮ್. ಅಲ್ಲಾಹನಿಂದ ಅವತೀರ್ಣವಾದವುಗಳ ಮೇಲೂ ಪ್ರವಾದಿ [ಸ]ರವರು
ನಿರ್ದೇಶಿಸಿರುವವುಗಳ ಮೇಲೂ ವಿಶ್ವಾಸವನ್ನಿಡುವುದು ಖಡ್ದಾಯವಾಗಿದೆ.
ಸರ್ವ ಆರಾಧನೆಗಳನ್ನು ನೈಜ ಆರಾಧ್ಯನಾದ ಅಲ್ಲಾಹನಿಗೆ
ಮಾತ್ರ ಅರ್ಪಿಸಬೇಕು ಎಂಬ ತತ್ವಾದರ್ಶದಲ್ಲಿ ದೃಢವಾಗಿರುವ ಧರ್ಮವೇ ಇಸ್ಲಾಮ್ ಹಾಗೂ ಅದು ವಿಶ್ವಾಸ, ಆಚಾರಾನುಷ್ಟಾನಗಳ ಒಂದು ಉಕ್ಕೂಟವೂ ಆಗಿದೆ. ಸದ್ಗುಣಗಳನ್ನೂ ಮೈಗೂಡಿಸುವುದಲ್ಲೂ,
ಅಧ್ಯಾತ್ಮಿಕ ಶುದ್ದೀಕರಣದಲ್ಲೂ, ಆ ಪ್ರಕಾರ
ಜೀವನವನ್ನು ಸಾಗಿಸುವುದರಲ್ಲೂ, ವ್ಯಕ್ತಿಗಳನ್ನು ಉತ್ತಮ
ಗೊಳಿಸುವುದರಲ್ಲೂ ಹಾಗೂ ಮುಸ್ಲಿಂ ಜನತೆಯ ಐಕ್ಯತೆ ಮತ್ತು ಒಗ್ಗಟ್ಟನ್ನು ಕಾದಿರಿಸುವುದರಲ್ಲೂ ಈ
ಆರಾಧನೆಗಳು ವಹಿಸುವ ಪಾಲು ಬಹು ದೊಡ್ಡದು.
ಆರು ಸ್ತಂಭಗಳ ಮೇಲಿನ ವಿಶ್ವಾಸವನ್ನು ಮೂಲಭೂತವಾಗಿ
ಘೋಷಿಸಲಾಗಿದೆ. ಅವುಗಳು:- 1. ಅಲ್ಲಾಹನ ಮೇಲಿರುವ ವಿಶ್ವಾಸ,
2. ಮಲಕುಗಳ ಮೇಲಿರುವ ವಿಶ್ವಾಸ, 3. ದೈವಿಕ ಗ್ರಂಥಗಳ
ಮೇಲಿರುವ ವಿಶ್ವಾಸ, 4. ಪ್ರವಾದಿಗಳ ಮೇಲಿರುವ ವಿಶ್ವಾಸ, 5. ಅಂತ್ಯ ದಿನದ ಮೇಲಿರುವ ವಿಶ್ವಾಸ, 6. ಹಿತ-ಅಹಿತಗಳು
ಅಲ್ಲಾಹನ ಅರಿವಿನಿಂದಲೂ ಅವನ ನಿರ್ಣಯದಿಂದಲೂ ಬರುವುದು ಎಂಬ ವಿಶ್ವಾಸ.
'ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್
ಎಂಬ ಎರಡು ಸಾಕ್ಷ್ಯ ವಚನಗಳು, ನಮಾಝ್ ಸಂಸ್ಥಾಪಿಸುವುದು, ಝಾಕಾತ್ ಪಾವತಿಸುವುದು, ರಮದಾನಿನ ವೃತಾನುಷ್ಠಿಸುವುದು,
ಶಕ್ತಿ ಸಾಮರ್ಥ್ಯವಿರುವವನು ಕಅಬಾಲಯಕ್ಕೆ ತೆರಳಿ ಹಜ್ ನಿರ್ವಹಿಸುವುದು ಮುಂತಾದ
ಐದು ಕರ್ಮಪರವಾದ ಸ್ತಂಭಗಳಿವೆ.
ಹೀಗೆ ವಿಶ್ವಾಸಪರವಾದ ಆರು ಸ್ತಂಭಗಳ ಮೇಲೂ ಕರ್ಮಪರವಾದ
ಐದು ಸ್ತಂಭಗಳ ಮೇಲೂ ನಿಬಂಧನೆಗಳಿಗೊಳಪಟ್ಟು ವಿಶ್ವಾಸ, ಕರ್ಮಾನುಷ್ಟಾನಗಳನ್ನು
ಅನುಷ್ಟಾನಿಸುತ್ತಾ ಜೀವಿಸುವ ಮೂಲಕ ಒಬ್ಬ ವ್ಯಕ್ತಿ ನೈಜ ಮುಸ್ಲಿಮನಾಗಿ ಬಿಡುತ್ತಾನೆ.
No comments:
Post a Comment