Thursday, April 3, 2014

ಸಂಭಂದಿಕರಿಗೆ ಸ್ವದಕ

ಅಲ್ಲಾಹನಿಂದ ಪ್ರತಿಫಲವನ್ನು ಆಗ್ರಹಿಸುತ್ತಾ ಯಾರಾದರೂ ಕುಟುಂಬಕ್ಕೆ ಖರ್ಚು ಮಾಡುವದಾದರೆ ಅದು ಸ್ವದಖವಾಗಿ ಪರಿಗಣಿಸಲಾಗುವುದೆಂದು ಹದೀಸ್ ನಮ್ಮನ್ನು ಕಲಿಸುತ್ತದೆ. ಮಾತ್ರವಲ್ಲ, ಯಾರಾದರೂ ಕುಟುಂಬಸ್ತರಿಗೆ ಸ್ವದಖ ನೀಡುವುದಾದರೆ ಅದಕ್ಕೆ ದ್ವಿಪ್ರತಿಫಲವಿದೆಯೆಂದೂ ಪ್ರವಾದಿ [ಸ] ಹೇಳಿದ್ದಾರೆ.

ಅಬೂ ಸಈದ್ ಅಲ ಅನ್ಸಾರಿ [ರ]ರವರಿಂದ ವರದಿ: ಪ್ರವಾದಿ [ಸ]ರವರು ನುಡಿದರು: ಓರ್ವ ಮುಸ್ಲಿಮ್ ತಣ್ಣ ಕುಟುಂಭಕ್ಕಾಗಿ ಖರ್ಚು ಮಾಡಿ ತನ್ಮೂಲಕ ಪ್ರತಿಫಲವನ್ನು ಆಗ್ರಹಿಸಿದರೆ ಅದು ಅವನಿಗೆ ಸ್ವದಖವಾಗಿದೆ.
[ಬುಖಾರಿ]

ಸಲ್ಮಾನ್ ಇಬ್ನ್ ಆಮೀರ್ ಅದ್ದಬಿಯ್ಯಿ [ರ]ರವರಿಂದ ವರದಿ: ರಸೂಲುಲ್ಲಾಹಿ [ರ]ರವರು ನುಡಿದರು: "ಬಡವರಿಗೆ ಕೊಡುವ ದಾನ ಸ್ವದಖ ಆಗಿದೆ. ನಿಕಟ ಸಂಭಂಧಿಕರಿಗೆ ಕೊಡುವ ದಾನವು ದ್ವಿಪ್ರತಿಫಲದಾಗಿದೆ. ಒಂದು: ಸ್ವದಖ ಇನ್ನೊಂದು ಕುಟುಂಬ ಸಂಭಂದವನ್ನು ಸೇರಿಸುವುದು. 
[ಇಬ್ನ್ ಮಾಜಃ]

No comments:

Post a Comment