ಸುಳ್ಳುಗಳಲ್ಲಿ ಅತ್ಯಂತ ಅಪಯಕಾರಿ ಸುಳ್ಳು ಅಲ್ಲಾಹನ, ಅಲ್ಲಾಹನ ರಸೂಲರ ಮತ್ತು ದೀನ್'ನ ಹೆಸರಿನಲ್ಲಿ ಹೇಳುವ
ಸುಳ್ಳಾಗಿದೆ. ಅಂತಹ ಜನರ ತಾಣ ನರಕಾಗ್ನಿಯಾಗಿದೆಯೆಂದು ಪ್ರಮಾಣಗಳ ಮೂಲಕ ತಿಳಿಯಬಹುದು.
ಅಲ್ಲಾಹು ಹೇಳುತ್ತಾನೆ:
ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲು ‘‘ಇದು ಹಲಾಲ್’’ ಹಾಗೂ ‘‘ಇದು ಹರಾಮ್’’
ಎಂದು ನಿಮ್ಮ ನಾಲಿಗೆಗಳು ಸೃಷ್ಟಿಸುವ ಸುಳ್ಳುಗಳನ್ನು ನೀವು ಹೇಳಬೇಡಿ. ಅಲ್ಲಾಹನ
ಮೇಲೆ ಸುಳ್ಳನ್ನು ಆರೋಪಿಸುವವರು ಎಂದೂ ವಿಜಯಿಗಳಾಗುವುದಿಲ್ಲ.
[ಕುರಾನ್, 16: 116]
ಮುಗೀರಃ [ರ]ರವರು ಪ್ರವಾದಿ [ಸ]ರವರು ಹೇಳುವುದನ್ನು
ಆಲಿಸಿದರು: ನನ್ನ ಹೆಸರಿನಲ್ಲಿ ಸುಳ್ಳು ನಿಮ್ಮಲ್ಲಿ ಯಾರಾದರೊಬ್ಬರ ಹೇಳುವ ಸುಳ್ಳಿನಂತೆಯಲ್ಲ.
ಯಾರಾದರೂ ಉದ್ದೇಶಪೂರ್ವಕವಾಗಿ ನನ್ನ ಹೆಸರಿನಲ್ಲಿ ಸುಳ್ಳು ಹೇಳಿದರೆ ಆತನ ಸೀಟನ್ನು ಆತನು
ನರಕಾಗ್ನಿಯಲ್ಲಿ ರಿಸರ್ವ್ ಮಾಡಿಡಲಿ.
[ಬುಖಾರಿ]
No comments:
Post a Comment