ನೀವು ಅದರಲ್ಲಿ (ಆ ಮಸೀದಿಯಲ್ಲಿ) ಖಂಡಿತ ನಿಲ್ಲಬೇಡಿ. ಪ್ರಥಮ ದಿನದಿಂದಲೇ ದೇವಭಯದ ಬುನಾದಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯು, ನೀವು ನಿಲ್ಲುವುದಕ್ಕೆ ಹೆಚ್ಚು ಅರ್ಹವಾಗಿದೆ. ಅದರಲ್ಲಿರುವವರು, ತಾವು ಸದಾ ನಿರ್ಮಲರಾಗಿರಬೇಕೆಂದು ಅಪೇಕ್ಷಿಸುತ್ತಾರೆ ಮತ್ತು ಅಲ್ಲಾಹನು ನಿರ್ಮಲರಾಗಿ ಇರುವವರನ್ನು ಪ್ರೀತಿಸುತ್ತಾನೆ.
[ಕುರಾನ್, 9: 108]
ಆದಮ್‌ರ ಸಂತತಿಗಳೇ, ನೀವು
ನಿಮ್ಮ ಎಲ್ಲ ಆರಾಧನಾ ಸ್ಥಳಗಳಲ್ಲಿ ನಿಮ್ಮ ಅಲಂಕಾರಗಳನ್ನು ಧರಿಸಿರಿ. ತಿನ್ನಿರಿ ಮತ್ತು ಕುಡಿಯಿರಿ
ಆದರೆ ಅಪವ್ಯಯ ಮಾಡದಿರಿ. ಖಂಡಿತವಾಗಿಯೂ ಅವನು ಅಪವ್ಯಯ ಮಾಡುವವರನ್ನು ಮೆಚ್ಚುವುದಿಲ್ಲ.
[ಕುರಾನ್, 7: 31]
No comments:
Post a Comment