ಅಬೂ ಹುರೈರಾ [ರ]ರವರ ವರದಿ: ಪ್ರವಾದಿ [ಸ]ರವರು, ತಮ್ಮ ತಾಯಿಯ ಖಬರನ್ನು ಸಂದರ್ಶಿಸಿದರು, ಆಗ ಅವರು ಅತ್ತರು, ಅವರ ಸುತ್ತ ಇದ್ದವರೂ ಅತ್ತರು, ನಂತರ ಪ್ರವಾದಿ [ಸ]ರವರು ಹೇಳಿದರು: "ನಾನು ನನ್ನ ತಾಯಿಗೆ ಇಸ್ತಿಗ್ಫಾರನ್ನು (ಪಾಪವಿಮೋಚನೆಯನ್ನು) ಕೇಳಲು ಅಲ್ಲಾಹನಲ್ಲಿ ಅನುಮತಿ ಕೇಳಿದೆ. ಆದರೆ ಅಲ್ಲಾಹನು ಅನುಮತಿ ಕೊಡಲಿಲ್ಲ. ನಾನು ನನ್ನ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದಾಗ ಅಲ್ಲಾಹನು ಅನುಮತಿ ಕೊಟ್ಟನು. ನೀವು ಖಬರನ್ನು ಸಂದರ್ಶಿಸಿ ಅದು ಮರಣವನ್ನು ನೆನಪಿಸುತ್ತದೆ."
[ಮುಸ್ಲಿಮ್]
No comments:
Post a Comment