ಅನೇಕ ಸಂದೇಶವಾಹಕರುಗಳನ್ನು ಈ ಭೂಮಿಗೆ ಕಳುಹಿಸಲಾಗಿದೆ.
ಅವರಲ್ಲಿ ಮೊಟ್ಟಮೊದಲನೆಯವರು ಪ್ರವಾದಿ ನೂಹ್ [ಅ] ಮತ್ತು ಕೊನೆಯ ಪ್ರವಾದಿ ಮುಹಮ್ಮದ್ [ಸ]ರವರೂ ಆಗಿದ್ದಾರೆ.
ಅವರಲ್ಲಿ "ಉಲುಲ್ ಅಝ್'ಮ್" [ದೃಢ ಮನಸ್ಕರು]ಗಳು:
ನೂಹ್ [ಅ], ಇಬ್ರಾಹೀಮ್ [ಅ], ಮೂಸಾ [ಅ],
ಈಸಾ [ಅ] ಮತ್ತು ಮುಹಮ್ಮದ್ [ಸ].
ಸಂದೇಶವಾಹಕರಲ್ಲಿ ಕೆಲವರನ್ನು ಅಥವಾ ಅವರಲ್ಲಿ ಸರ್ವರನ್ನೂ
ನಿಷೇಧಿಸುವವನು ಅಲ್ಲಾಹನ ಮೇಲೆ ಅವಿಶ್ವಾಸ ಕೈಗೊಂಡನು ಕಾರಣ ಅವರು ಖುರ್ ಆನ್ ಮತ್ತು
ಸುನ್ನತ್ತನ್ನು ನಿಷೇಧಿಸಿದರು.
ಪ್ರವಾದಿ ಮುಹಮ್ಮದ್ [ಸ]ರವರು ಕಲಿಸಿ ಕೊಟ್ಟಿರುವವುಗಳ
ಆಧಾರದಲ್ಲಿ ಕರ್ಮಗಳನ್ನೆಸಗುವುದು ಕಡ್ಡಾಯವಾಗಿದೆ.
ಅಲ್ಲಾಹನು ನುಡಿಯುತ್ತಾನೆ:
...ಸಂದೇಶವಾಹಕರು ನಿಮಗೆ ನೀಡಿದ್ದನ್ನು ಸ್ವೀಕರಿಸಿ
ಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು
ಅಲ್ಲಾಹನಿಗೆ ಅಂಜಿರಿ...
[ಕುರಾನ್, 59: 7]
No comments:
Post a Comment