Sunday, April 27, 2014

ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು


ಪ್ರವಾದಿ [ಸ]ರವರ ಮತ್ತು ಅಬೂಬಕರ್ [ರ]ರವರ ಅಡಗಿ ಕುಳಿತಿರುವ ಗುಹೆಯ ದ್ವಾರದ ಬಳಿಗೆ ತಲುಪಿದರು. ಆಗ ಅಬೂಬಕರ್ [ರ]ರವರು ಹೇಳಿದರು: ಇದೋ ಶತ್ರುಗಳು ನಮ್ಮ ಮುಂದಿದ್ದಾರೆ. ಅವರೊಮ್ಮೆ ಬಗ್ಗಿ ನೋಡಿದರೆ ನಾವು ಹಿಡಿಯಲ್ಪಡುವೆವು. ಆಗ ಪ್ರವಾದಿ [ಸ]ರವರು ಹೇಳಿದರು: "ಅಬೂಬಕರ್ [ರ]ರವರೇ, ಶಾಂತರಾಗಿರಿ. ನೀವು ದುಃಖಿಸದಿರಿ, ಅಲ್ಲಾಹನು ನಮೊಂದಿಗಿದ್ದಾನೆ. ಆಗ ಅಬೂಬಕರ್ [ರ], ಪ್ರವಾದಿಯವರೇ ನನ್ನ ವಿಷಯದಲ್ಲಿ ಯೋಚಿಸಲಿಲ್ಲ ನಾನು ದುಃಖಕ್ಕೀಡಾಗಿರುವುದು. ಬದಲಾಗಿ ತಮಗೇನಾದರೂ ಸಂಭವಿಸುವುದೋ ಎಂದು ಯೋಚಿಸುತ್ತಾ ನಾನು ದುಃಖಿಸುತ್ತಿದ್ದೇನೆ ಎಂದರು. ನೋಡಿರಿ, ಆ ಸ್ನೇಹಿತನ ಉನ್ನತಿ ಪ್ರಸ್ತುತಃ ಘಟನೆಯನ್ನು ಅಲ್ಲಾಹನು ಈ ರೀತಿ ಜಗತ್ತಿನ ಮುಂದೆ ಅನಾವರಣ ಗೊಳಿಸಿದನು.

ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ. 
[ಕುರಾನ್, 9: 40]

No comments:

Post a Comment