Thursday, April 10, 2014

ಪ್ರವಾದಿ [ಸ]ರವರ ನಾಮಗಳು


ಪ್ರವಾದಿ [ಸ]ರವರಿಗೆ ಅನೇಕ ನಾಮಗಳಿರುವುದಾಗಿ ಹದೀಸ್'ಗಳಿಂದ ತಿಳಿಯಬಹುದು. 

ಜುಬೈರ್ ಇಬ್ನ್ ಮುತ್'ಇಂ [ರ]ರವರಿಂದ ವರದಿ: ಪ್ರವಾದಿ [ಸ]ರವರು ಹೇಳುವುದನ್ನು ನಾನು ಆಲಿಸಿದ್ದೇನೆ. "ಖಂಡಿತವಾಗಿಯೂ ನನಗೆ ತುಂಬಾ ನಾಮಗಳಿವೆ. ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಅವಿಶ್ವಾಸವನ್ನು ಅಳಿಸಿ ಬಿಡುವ ಅಲ್ ಮಾಹಿ ಆಗಿರುವೆನು. ನಾನು ನನ್ನ ಸುತ್ತಲೂ ಜನರನ್ನು ಒಟ್ಟು ಸೇರಿಸುವ ಅಲ್ ಹಾಶಿರ್ ಆಗಿರುವೆನು. ನಾನು, ಇನ್ನು ಯಾರೂ ಬರಲಿಕ್ಕಿಲ್ಲದ ಅಂತ್ಯದವನು (ಪ್ರವಾದಿ) ಆಗಿರುವೆನು." 
[ಬುಖಾರಿ, ಮುಸ್ಲಿಮ್]


ಇನ್ನೊಂದು ಹದೀಸ್'ನಲ್ಲಿ:
ಅಬೂ ಮೂಸಲ್ ಅಶ್'ಅರಿ [ರ]ರವರಿಂದ ವರದಿ: ಪ್ರವಾದಿ [ಸ]ರವರೇ ಸ್ವಯಂ ತಮಗೆ ಕೆಲವು ನಾಮಗಳಿವೆಯೆಂದು ನಮ್ಮೊಡನೆ ಹೇಳುತ್ತಿದ್ದರು. "ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಮುಖಫ್ಫ್ (ಹೆಚ್ಚು ಜನರಿಂದ ಅನುಸರಿಸಲ್ಪಡುವ ದೂತನು) ಆಗಿರುವೆನು. ಅಲ್ ಹಾಶಿರ್ ಆಗಿರುವೆನು, ತೌಬಾದ ದೂರನಾಗಿರುವೆನು, ಕಾರುಣ್ಯದ ದೂತನಾಗಿರುವೆನು." 
[ಮುಸ್ಲಿಮ್]

No comments:

Post a Comment