ಜಾಬೀರ್ [ರ]ರವರು ವರದಿ ಮಾಡುತ್ತಾರೆ: ನಾವೊಮ್ಮೆ
ಪ್ರವಾದಿ [ಸ]ರವರ ಜೊತೆಯಲ್ಲಿದ್ದೆವು. ಆಗ ಪೂರ್ಣ ಚಂದ್ರನನ್ನು ನೋಡಿ ಪ್ರವಾದಿ [ಸ]ರವರು
ಹೇಳಿದರು:
"ಖಂಡಿತವಾಗಿಯೂ ನೀವು ಪರದೆಯಿಲ್ಲದೆ ಈ ಪೂರ್ಣ
ಚಂದ್ರನನ್ನು ದರ್ಶಿಸುವಂತೆ ನೀವು ನಿಮ್ಮ ಪ್ರಭುವನ್ನು ಕಾಣುವಿರಿ. ನಿಮಗೆ ಸಾಧ್ಯವಾಗುವುದಾದರೆ
ಸೂರ್ಯೋದಯದ ಮತ್ತು ಸುರ್ಯಾಸ್ತಮದ ನಮಾಝ್'ಗಳು ನಿಮ್ಮನ್ನು ಪರಾಜಿತ
ಗೊಳಿಸಿದಿರಲಿ. (ಅರ್ಥಾತ್: ಅವುಗಳನ್ನು ನಿಶ್ಚಯಿಸಲ್ಪಟ್ಟ ಸಮಯದಲ್ಲಿ ನಿರ್ವಹಿಸುವುದರಲ್ಲಿ
ನಿಮಗೆ ಯಾವುದೇ ಲೋಪದೋಷ ಉಂಟಾಗ ಕೂಡದು).
"ಸೂರ್ಯೋದಯಕ್ಕೆ ಮುಂಚೆ ಮತ್ತು
ಸುರ್ಯಾಸ್ತಮಾನಕ್ಕೆ ಮುಂಚೆ ತಮ್ಮ ಪ್ರಭುವಿನ ಸುತ್ತಿಯೊಂದಿಗೆ (ಅವನ) ಪರಿಪಾವನತೆಯನ್ನು
ಕೊಂಡಾಡಿರಿ." [ಕುರಾನ್, ಸೂರಃ ಖಾಫ್: 39]
[ಮುಸ್ಲಿಮ್]
No comments:
Post a Comment