ರಬೀಉಲ್ ಅವ್ವಲಿನ ಸೋಮವಾರ ದಿನ ಜನಿಸಿದರು. ರಬೀಉಲ್ ಅವ್ವಲಿನ 2 ರಂದು, 8 ರಂದು, 10 ರಂದು, 12 ರಂದು ಮುಂತಾದ ಅಭಿಪ್ರಾಯಗಳಿವೆ. ಇಮಾಮ್ ಇಬ್ನ್ ಕಥೀರ್ [ರ] ಹೇಳಿದರು: ಪ್ರವಾದಿ [ಸ]ರವರು ಆನೆ ಕಳಹ ವರ್ಷದಲ್ಲಿ ಜನಿಸಿದ್ದಾರೆಂಬುದು ದೃಢಪಟ್ಟಿರುವುದೂ ಸರಿಯಾದ ಅಭಿಪ್ರಾಯವೂ ಆಗಿದೆ. ಇದನ್ನೇ ಇಮಾಮ್ ಬುಖಾರಿಯವರ ಅಧ್ಯಾಪಕರಾಗಿರುವ ಇಬ್ರಾಹೀಮ್ ಇಬ್ನ್ ಮುಂದಿರುಲ್ ಇಸಾಮಿ ಮತ್ತು ಖಲಿಫತ್ ಇಬ್ನ್ ಖಯ್ಯಾತ್'ರವರು ಹೇಳಿದ್ದಾರೆ. ಪ್ರವಾದಿ [ಸ]ರವರ ಪಿತರು ಅವರ ಜನನಕ್ಕೆ ಮುಂಚೆಯೇ ಇಹಲೋಕಕ್ಕೆ ವಿದಾಯ ಹೇಳಿದರು.
No comments:
Post a Comment