ಕುರಾನ್ ಪಾರಾಯಣ ಗೈಯ್ಯುವುದು ಅಲ್ಲಾಹನ ಬಳಿ ತುಂಬಾ
ಪ್ರತಿಫಲವಿರುವ ಕರ್ಮವಾಗಿದೆ. ಪ್ರತಿಯೊಂದು ಅಕ್ಷರಕ್ಕೆ ಹತ್ತು ಪ್ರತಿಫಲವಿದೆ. ಪ್ರವಾದಿ
[ಸ]ರವರು ನುಡಿದರು. ಯಾರಾದರೂ ಕುರ್ ಆನಿನಿಂದ ಒಂದು ಅಕ್ಷರ ಪಾರಾಯಣ ಗೈದರೆ ಆತನಿಗೆ ಒಂದು
ಒಳಿತಿದೆ. ಪ್ರತಿಯೊಂದು ಒಳಿತು ಹತ್ತು ಒಳಿತಿಗೆ ಸಮಾನವಾಗಿದೆ. ಅಲಿಫ್-ಲಾಮ್-ಮೀಮ್ ಎಂಬುದನ್ನು
ನಾನು ಒಂದಕ್ಷರವೆನ್ನುವುದಿಲ್ಲ. ಅಲಿಫ್ ಒಂದು ಅಕ್ಷರ, ಲಾಮ್ ಒಂದು
ಅಕ್ಷರ, ಮೀಮ್ ಇನ್ನೊಂದು ಅಕ್ಷರವಾಗಿದೆ.
[ದಾರಿಮಿ, ತಿರ್ಮಿದಿ]
No comments:
Post a Comment