ಪ್ರಭು ಎಂದರೆ:- ಸೃಷ್ಟಿಕರ್ತನು, ಒಡೆಯನು, ಸರ್ವ ನಿಯಂತ್ರಕನು ಎಂದರ್ಥ.
ಪ್ರಭುವಿನ ಕುರಿತಿರುವ ಜ್ಜಾನವನ್ನು ಅವರ ಸೃಷ್ಟಿಗಳ
ಮೂಲಕ ಮತ್ತು ದೃಷ್ಟಾಂತಗಳ ಮೂಲಕ ತಿಳಿಯಬೇಕು. ಅವನ ದೃಷ್ಟಾಂತಗಳಲ್ಲಿ ಅತೀ ಶ್ರೇಷ್ಠವಾದವುಗಳು:
ರಾತ್ರಿ,
ಹಗಲು, ಸೂರ್ಯನು, ಚಂದ್ರನು,
ಭೂಮ್ಯಾಕಾಶಗಳು.
ಅಲ್ಲಾಹನು ಪವಿತ್ರ ಖುರ್ ಆನಿನಲ್ಲಿ ನುಡಿಯುತ್ತಾನೆ:
ರಾತ್ರಿ ಮತ್ತು ಹಗಲು, ಸೂರ್ಯ
ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ
ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ.
ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ.
[ಕುರಾನ್, 41: 37]
ಅಲ್ಲಾಹನನ್ನು ಮಾತ್ರ ಆರಾಧಿಸಬೇಕೆಂದು ಮುಖ್ಯ
ಉದ್ದೇಶದಿಂದ ಅಲ್ಲಾಹನು ಮಾನವನನ್ನು ಸೃಷ್ಟಿಸಿದನು. ಅಲ್ಲಾಹನು ನುಡಿಯುತ್ತಾನೆ:
ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನ
ಆರಾಧನೆಗೆಂದೇ ಸೃಷ್ಟಿಸಿರುವೆನು
[ಕುರಾನ್, 51: 56]
ಆರಾಧನೆಯಲ್ಲಿರುವ ಅಲ್ಲಾಹನ ಏಕತ್ವವನ್ನು ಅಂಗೀಕರಿಸಿ, ಅವನ ಆದೇಶ-ನಿರ್ದೇಶನಗಳನ್ನು ಅನುಸರಿಸುತ್ತಲೂ ವಿರೋಧಿಸುವುಗಳನ್ನೂ ವರ್ಜಿಸುತ್ತಲೂ
ಅವನನ್ನು ಮಾತ್ರ ಆರಾಧಿಸುವುದು ಎಂಬುವುದೇ ಆರಾಧನೆಯಂದಿರುವ ಉದ್ದೇಶ.
No comments:
Post a Comment