Wednesday, December 25, 2013

ಸಾಮರ್ಥ್ಯಕ್ಕಿಂತ ಹೆಚ್ಚು ಆರಾಧನೆ ಸಲ್ಲದು

ಆಯಿಶಾ (ರ) ಹೇಳುತ್ತಾರೆ - ಪ್ರವಾದಿ (ಸ) ಜನರಿಗೆ ಯಾವುದಾದರೂ ಆಜ್ಜೆ ಕೊಡುವುದಾದರೆ ಅವರ ಸಾಮರ್ಥ್ಯಕ್ಕನುಸಾರವೇ ನೀಡುತ್ತಿದ್ದರು. ಜನರು ಹೇಳುತ್ತಿದ್ದರು ಪ್ರವಾದಿವರ್ಯರೇ! ನಾವು ತಮ್ಮಂತೆ ಅಲ್ಲವಲ್ಲ. (ಏಕೆಂದರೆ ತಮಗೆ ಹೆಚ್ಚು ಕರ್ಮ ಮಾಡಬೇಕಾಗುತ್ತದೆ) ಅಲ್ಲಾಹನು ತಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನೆಲ್ಲ ಕ್ಷಮಿಸಿ ಬೆಟ್ಟಿದ್ದಾನೆ." ಇದರಿಂದ ಪ್ರವಾದಿ (ಸ) ಕೋಪಗೊಳ್ಳುತ್ತಿದ್ದರು. ಅವರ ಕೋಪವು ಅವರ ಮುಖಭಾವದಿಂದ ಪ್ರಕಟವಾಗುತ್ತಿತ್ತು. ತರುವಾಯ ಹೀಗೆನ್ನುತ್ತಿದ್ದರು, "ನಾನು ನಿಮೆಲ್ಲರಿಗಿಂತಲೂ ಹೆಚ್ಚು ಅಲ್ಲಾಹನನ್ನು  ಭಯಪಡುವವನಾಗಿದ್ದೇನೆ. ನಿಮೆಲ್ಲರಿಗಿಂತಲೂ ಹೆಚ್ಚು ಅಲ್ಲಾಹನನ್ನು ತಿಳಿದವಾನಾಗಿದ್ದಾನೆ.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment