Tuesday, December 31, 2013

ಸಲಾತ್

ಅಬೂ ಹುಮೈದ್ ಸ್ಸಾಇದೀ(ರ) ಅವರಿಂದ ವರದಿ, ನಾವು ಪ್ರವಾದಿ ವರ್ಯರಲ್ಲಿ ಈ ರೀತಿ ವಿಚಾರಿಸಿದೆವು-ಅಲ್ಲಾಹನ ಸಂದೇಶವಾಹಕರೇ! ನಾವು ತಮ್ಮ ಮೇಲೆ ಹೇಗೆ ಸಲಾತ್ ಹೆಳಬೇಕು? ಪ್ರವಾದಿ(ಸ.ಅ) ಹೇಳಿದರು:ಹೀಗೆಹೇಳಿರಿ,
'ಅಲ್ಲಾಹುಮ್ಮಸಲ್ಲಿಅಲಾ ಮುಹಮ್ಮದಿನ್ ವ ಅಝ್ ವಾಜಿಹೀ ವದುರ್ರಿಯ್ಯತಿಹೀ ಕಮಾ ಸಲ್ಲೈತ ಅಲಾ ಇಬ್ರಾಹೀಮ ವಬಾರಿಕ್ ಅಲಾ ಮುಹಮ್ಮದಿನ್ ವ ಅಝ್ ವಾಜಿಹೀ ವದುರ್ರಿಯ್ಯತಿಹೀ ಕಮಾ ಬಾರಕ್ತ ಅಲಾ ಇಬ್ರಾಹೀಮ ಇನ್ನಕ ಹಮೀದುಮ್ಮಜೀದ್.' (' ಓ ಅಲ್ಲಾಹ್!! ಮಹಮ್ಮದರ, ಅವರ ಪತ್ನಿಯರ ಮತ್ತು ಮಕ್ಕಳ ಮೇಲೆ ಕರುಣೆ ವರ್ಷಿಸು. ನೀನು ಇಬ್ರಾಹೀಮರ ಮೇಲೆ ಕರುಣೆ ವರ್ಷಿಸಿದಂತೆ ಮತ್ತು ಮುಹಮ್ಮದರ, ಅವರ ಪತ್ನಿಯರಮತ್ತು ಮಕ್ಕಳ ಮೇಲೆ ಅನುಗ್ರಹ ವರ್ಷಿಸು.ನೀನು ಇಬ್ರಾಹೀಮರ ಮೇಲೆ ವರ್ಷಿಸಿದಂತೆ. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಾನನೂ ಆಗಿರುವೆ'

[ಮುತಫಕುನ್ ಅಲೈಹಿ]

No comments:

Post a Comment