ಅಬೂ
ಮಸ್ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು. ಅಲ್ಲಾಹನ ಗ್ರಂಥವನ್ನು ಹೆಚ್ಚು
ಕಲಿತವರು ಸಮುದಾಕಕ್ಕೆ ನಮಾಝ್ ಮಾಡಿಸಲಿ. ಒಂದು ವೇಳೆ ಕುರ್'ಆನಿನ
ಜ್ಜಾನದಲ್ಲಿ ಎಲ್ಲರೂ ಸಮಾನರಾಗಿದ್ದರೆ ಸುನ್ನತನ್ನು (ಪ್ರವಾದಿ ಚರ್ಯೆಯನ್ನು) ಹೆಚ್ಚು ಕಲಿತವನು
ಇಮಾಮತ್ ಮಾಡಲಿ. ಒಂದು ವೇಳೆ ಸುನ್ನತ್'ನ ಜ್ಜಾನದಲ್ಲಿ ಎಲ್ಲರೂ
ಸಮಾನರಾಗಿದ್ದರೆ ಮೊದಲು ಹಿಜ್ರತ್ ಮಾಡಿದವ ಇಮಾಮತ್ ಮಾಡಲಿ. ಒಂದು
ವೇಳೆ ಹಿಜ್ರತ್ ಮಾಡುವುದರಲ್ಲಿ ಎಲ್ಲರೂ
ಸಮಾನರಾಗಿದ್ದರೆ ಅವರ ಪೈಕಿ ಪ್ರಾಯದಲ್ಲಿ ಹಿರಿಯನಾದವನು ಇಮಾಮತ್ ಮಾಡಲಿ. ಒಬ್ಬರ
ಅಧಿಕಾರದಲ್ಲಿರುವ ಜಾಗದಲ್ಲಿ ಇನ್ನೊಬ್ಬನು ಇಮಾಮತ್ ಮಾಡದಿರಲಿ ಮತ್ತು ಅವನ ಮನೆಯಲ್ಲಿ ಅವನ
ಪೀಟದಲ್ಲಿ ಅವನ ಅನುಮತಿಯಿಲ್ಲದೆ ಕೂರದಿರಲಿ.
[ಮುಸ್ಲಿಮ್]
No comments:
Post a Comment