ಇಬ್ನ್
ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ರಾತ್ರಿಯ ನಮಾಝ್ ಎರಡೆರಡು ರಕಅತ್
ಆಗಿದೆ. ಇನ್ನು ನಿಮ್ಮ ಪೈಕಿ ಯಾರಿಗಾದರೂ ಸುಬಹ್ ಆಗುವುದೆಂದು ಭಯವಾದರೆ ಒಂದು ರಕಅತ್
ನಿರ್ವಹಿಸಲಿ. ಅದು ಅವನು ಮಾಡಿದ ನಮಾಝ್'ನ್ನು
ವಿತ್ರ್ [ಬೆಸ ಸಂಖ್ಯೆ] ಮಾಡುವನು.
[ಮುತ್ತಫಕುನ್ ಅಲೈಹಿ]
ಪ್ರವಾದಿ [ಸ] ಹೇಳಿದರು: ರಾತ್ರಿಯ
ವೇಳೆ ವಿತ್ರನ್ನು ನಿಮ್ಮ ಕೊನೆಯ ನಮಾಝ್ ಆಗಿ ಮಾಡಿರಿ. [ವರದಿ: ಇಬ್ನು ಉಮರ್ (ರ)]
[ಸಹೀಹ್ ಮುಸ್ಲಿಮ್]
ಪ್ರವಾದಿ [ಸ] ರಾತ್ರಿಯ ಎಲ್ಲಾ
ಭಾಗಗಳಲ್ಲಿ ವಿತ್ರ್ ನಮಾಝ್ ನಿರ್ವಹಿಸಿದ್ದಾರೆ. ರಾತ್ರಿಯ ಮೊದಲ ಭಾಗದಲ್ಲಿ, ರಾತ್ರಿಯ ಕೊನೆಯ ಭಾಗದಲ್ಲಿ ಮತ್ತು
ತಮ್ಮ ಕೊನೆಯ ವಯಸ್ಸಿನಲ್ಲಿ ರಾತ್ರಿಯ ಅಂತಿಮ ಭಾಗದಲ್ಲಿ ವಿತ್ರ್ ನಿರ್ವಹಿಸಿದ್ದರು. [ವರದಿ: ಆಯಿಷಾ
(ರ)]
[ಬುಖಾರಿ, ಮುಸ್ಲಿಮ್]
No comments:
Post a Comment