ಅಬೂಹುರೈರಾ
[ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಶುಕ್ರವಾರದ ದಿನವಾದರೆ ಮಲಕ್'ಗಳು ಮಸೀದಿಯ ಬಾಗಿಲಲ್ಲಿ ನಿಂತು ಹೊಳ್ಳುತ್ತಾರೆ. ಅವರು
ಮೊದಲು ಬರುವವರನ್ನು ಬರೆಯುತ್ತಾರೆ. ಪ್ರಥಮವಾಗಿ ಬಂದವರ ಉದಾಹರಣೆ ಒಂಟೆಯನ್ನು ಬಲಿ
ನೀಡಿದವನಂತಿದೆ. ಅನಂತರ ಬಂದವನು ಹಸುವನ್ನು ಬಲಿ
ನೀಡಿದವನಂತಿದೆ. ಆ ಬಳಿಕ ಬಂದವನು ಆಡನ್ನು ಬಲಿ
ನೀಡಿದಂತೆ. ಅನಂತರ ಬಂದವನು ಕೋಳಿಯನ್ನು ಬಲಿ
ನೀಡಿದಂತೆ. ಅನಂತರ ಬಂದವನು ಕೋಳಿಯ ಮೊಟ್ಟೆ ದಾನ ನೀಡಿದಂತೆ.
ಇಮಾಮ್ (ವೇದಿಕೆಯೇರಲು) ಹೊರಟಾಗ ಅವರು ತಮ್ಮ ಕಡತವನ್ನು ಮಡಚಿ ಪ್ರವಚನವನ್ನು ಆಲಿಸುತಾರೆ.
[ಮುತ್ತಫಕುನ್ ಅಲೈಹಿ]
No comments:
Post a Comment