Tuesday, December 31, 2013

ಜರೆಯುದು

ಬಿಲಾಲ್ ಬಿನ್ ಅಬ್ದುಲ್ಲಾ ಬಿನ್ ಉಮರ್ [ರ] ಅವರಿಂದ ವರದಿಯಾದಿಗೆ. ಅವರು ತಮ್ಮ ತಂದೆಯಿಂದ ವರದಿ ಮಾಡಿದರು. ಪ್ರವಾದಿ [ಸ] ಹೇಳಿದರು - ಮಹಿಳೆಯರು ಮಸೀದಿಯಲ್ಲಿ ತಮ್ಮ ಪಾಲನ್ನು ಪಡೆಯಲಿಕ್ಕಾಗಿ ಮಸೀದಿಗೆ ಹೋಗಲು ನಿಮ್ಮಿಂದ ಅನುಮತಿ ಕೇಳಿದರೆ ಅವರನ್ನು ತಡೆಯದಿರಿ. ಬಿಲಾಲ್ [ರ] ಹೇಳಿದರು - ನಾವು ಅವರನ್ನು ತಡೆಯುವೆವು. ಅಬ್ದುಲ್ಲಾ [ರ] ಬಿಲಾಲ್'ರಿಗೆ ಹೇಳಿದರು - ನಾನು ಪ್ರವಾದಿವರ್ಯರು [ಸ] ಹೇಳಿದ್ದಾರೆಂದು ಹೇಳುವಾಗ ನೀನು ಅವರನ್ನು ತಡೆಯುವೆ ಎಂದು ಹೆಳುತ್ತಿಯಾ? ಸಾಲಿಮ್'ರವರ [ರ] ವರದಿಯಲ್ಲಿ ಹಿಗೆದೆ - ಅವರು ತಮ್ಮ ತಂದೆಯಿಂದ ಹೀಗೆ ವರದಿ ಮಾಡಿರುವರು - ಅನಂತರ ಅಬ್ದುಲ್ಲಾ [ರ] ಬಿಲಾಲ್'ರ ಕಡೆಗೆ ಹರಿಸುತ್ತಾ ಅವರನ್ನು ಜರೆದರು. ಹಾಗೆ ಜರೆದುದನ್ನು ನಾನೆಂದು ಕಂಡಿರಲಿಲ್ಲ. ನಾನು ಪ್ರವದಿವರ್ಯರು [ಸ] ಹೇಳಿರುವರು ಎಂದು ಹೇಳುವಾಗ ನೀವು ಅಲ್ಲಾಹನಾಣೆ! ನಾನು ಅವರನ್ನು ತಡೆಯುವೆನು ಎಂದು ಹೇಳುವೆಯಾ

[ಮುಸ್ಲಿಮ್]

No comments:

Post a Comment