ಮಕ್ಕಾ
ಪಟ್ಟಣದಲ್ಲಿ ಮಖ್'ಝೂಮ್ ಎಂಬ ಪ್ರತಿಷ್ಠಿತ ಗೋತ್ರದ ಮಹಿಳೆಯೊಬ್ಬಳು ಕಳವು
ಮಾಡಿ ಸಿಕ್ಕಿಬಿದ್ದಳು. ವಿಚಾರಣೆಯ ಬಳಿಕ ಕಾನೂನು ಪ್ರಕಾರ ಆಕೆಯ ಕೈ ಕಡಿಯಲು ತೀರ್ಮಾನಿಸಲಾಯಿತು.
ಆಗ ಆಕೆಯ ಬಂಧುಗಳು ಬಂದು, ಆಕೆ ಬಹಳ ಕುಲೀನ ಹಿನ್ನಲೆಯಾವಳಾದ್ದರಿಂದ ಆಕೆಯ
ಶಿಕ್ಷೆಯನ್ನು ದದ್ದುಗೊಳಿಸಬೇಕೆಂದು ಆಗ್ರಹಿಸಿದರು. ಪ್ರವಾದಿ ಮುಹಮ್ಮದ್ [ಸ] ಈ ಒತ್ತಡಕ್ಕೆ
ಮಣೆಯಲಿಲ್ಲ. ಮಾತ್ರವಲ್ಲ, ಅವರು ಈ ಬಗೆಯಲ್ಲಿ ಒತ್ತಡ ಹೆರುವವರ ವಿರುದ್ದ ತಮ್ಮ
ಅಸಮಾಧಾನವನ್ನು ಪ್ರಕಟಿಸುತ್ತಾ, ಹೀಗೆಂದು ಘೋಷಿಸಿದರು. ಈ ಹಿಂಗೆ ಜನಾಂಗವು ನಾಶವಾಗಿದೆ.
ಏಕೆಂದರೆ ಅವರು ತಮ್ಮಲ್ಲಿನ ಬಡ ಅಪರಾಧಿಗಳನ್ನು ದಂಡಿಸುತ್ತಿದ್ದರು. ಹಾಗೂ ಶ್ರೀಮಂತರ
ಅಪರಾಧಗಳನ್ನು ಕಡೆಗಣೆಸುತ್ತಿದ್ದರು. ಅಲ್ಲಾಹನಾಣೆ, ಸ್ವತ ನನ್ನ ಮಗಳು ಫಾತಿಮಾ ಕಳವು ಮಾಡಿದ್ದರೆ ಆಕೆಯ ಕೈಯನ್ನೂ ಕಡಿದು ಬಿಡಲಾಗುತ್ತಿತ್ತು.
[ಸಹೀಹ್ ಬುಖಾರಿ]
No comments:
Post a Comment