ಇಬ್ನ್ ಉಮರ್ (ರ)
ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳಿದರು, "ಮರಗಳ ಪೈಕಿ ಎಲೆಗಳು ಉದುರದಂತಹ ಒಂದು ಮರವಿದೆ. ಮುಸ್ಲಿಮನ ಉದಾಹರಣೆಯು ಇದೇ ಆಗಿದೆ ಅದು ಯಾವ
ಮರವೆಂದು ಹೇಳಿರಿ. ಜನರು ಕೇಳಿ ಕಾಡಿನ ಮರಗಳ ಬಗ್ಗೆ ಆಲೋಚಿಸಿದರು. ಇಬ್ನ್ ಉಮರ್ (ರ)
ಹೇಳುತ್ತಾರೆ,
ಅದು ಖರ್ಜೂರದ ಮರವೆಂದು ನನ್ನ ಮನಸ್ಸಿಗೆ ಹೊಳೆಯಿತು. ಆದರೆ ದೊಡ್ಡವರ
ಸಭೆಯಲ್ಲಿ ನಾನು ಕಿರಿಯವನಾದುದರಿಂದ ನನಗೆ ಹೇಳಲು ಸಂಕೋಚವಾಯಿತು. ಕೊನೆಗೆ ಜನರು ಕೇಳಿದರು
"ಪ್ರವಾದಿವರ್ಯರೇ ಹೇಳಿರಿ." ಪ್ರವಾದಿ [ಸ], "ಅದು ಖರ್ಜೂರದ ಮರ"ವೆಂದು ಹೇಳಿದರು.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment