Thursday, September 15, 2016

ಉಹ್ದ್ ಯುದ್ಧ

ಬದ್ರ್ ಸೋಲು ಕುರೈಶಿಗಳನ್ನು ಅಪಮಾನಿತರನ್ನಾಗಿ ಮಾಡಿತು. ಪ್ರತೀಕಾರ ತೀರಿಸಲು ಅಬೂ ಸುಫ್ಯಾನ್ ಒಂದು ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದರು. 3,000 ಸೈನಿಕರು ಎಲ್ಲಾ ವಿಧದ ಸಿದ್ದತೆಯೊಂದಿಗೆ ಮದೀನಾಕ್ಕೆ ಹೊರಟರು. ಪ್ರವಾದಿ[]ರವರು ವಿಷಯ ತಿಳಿದು ಏನು ಮಾಡುವುದೆಂದು ಯೋಚಿಸಿದರು. ಶತ್ರುಗಳಿಗೆ ಮದೀನಾ ಪ್ರವೇಶಿಸಲು ಅವಕಾಶ ನೀಡದೆ ಮದೀನಾದಿಂದ ಹೊರಗೆ ಅವರೊಂದಿಗೆ ಹೋರಾಡಬೇಕೆಂದು ಅಭಿಪ್ರಾಯಪಡಲಾಯಿತು. ಅದರ ಪ್ರಕಾರ ಹಿಜಿರಾ ಮೂರನೇ ವರ್ಷ ಶವ್ವಾಲ್ 15 ರಂದು ಶನಿವಾರ ಪ್ರವಾದಿ []ರವರು ಸುಮಾರು 1,000 ಮಂದಿ ಸಹಾಬಿಗಳೊಂದಿಗೆ ಶತ್ರುಗಳ ವಿರುದ್ಧ ಹೋರಾಡಲು ಹೊರಟರು.

ದಾರಿಯ ಮಧ್ಯೆ 300 ಕಪಟವಿಶ್ವಾಸಿಗಳು ಹಿಂದೆ ಸರಿದರು. ಇವರು ನಿಜವಾದ ವಿಶ್ವಾಸವಿರಿಸಿದರೆ ಮುಸ್ಲಿಮರಂತೆ ಅಭಿನಯಿಸಿ ಮುಸ್ಲಿಮರೊಂದಿಗೆ ಜೀವಿಸುತ್ತಿದ್ದರು. ಪ್ರವಾದಿ []ರವರು ಉಹ್'ದ್ ಪರ್ವತದ ಖಣಿವೆಯಲ್ಲಿ ಸೇನೆಯನ್ನು ನಿಲ್ಲಿಸಿದರು. ಅಬ್ದುಲ್ಲಾಹಿಬಿನ್ ಝುಬೈರ್ []ರವರ ನೇತ್ರತ್ವದಲ್ಲಿ ದೃಢಕಾಯರಾದ 40 ಮಂದಿಯನ್ನು ಬೆಟ್ಟದ ತುದಿಯಲ್ಲಿ ನಿಲ್ಲಿಸಿದರು. ರಣರಂಗದಲ್ಲಿ ಏನೇ ಸಂಭವಿಸಿದರೂ ಅಲ್ಲಿಂದ ಕೆಳಗಿಳಿಯಬಾರದೆಂದು ಪ್ರವಾದಿ []ಯವರು ಅವರಿಗೆ ಪ್ರತ್ಯೇಕ ಸೂಚನೆಯನ್ನೂ ನೀಡಿದ್ದರು.

ಯುದ್ಧ ಆರಂಭಗೊಂಡಿತು. ಅತ್ಯಂತ ಉಗ್ರ ಸಂಘರ್ಷ. ಮುಸ್ಲಿಮರ ಕೈಮೇಲಾಗುವುದನ್ನು ಕಂಡ ಶತ್ರು ಸೇನೆ ಪರಿಭ್ರಾಂತವಾಗಿ (ದಿಕ್ಕು ತೋಚದೆ) ಶಸ್ತ್ರಾಸ್ತ ಮತ್ತಿತ್ತರ ಸೊತ್ತುಗಳನ್ನು ತೊರೆದು ಓಟಕ್ಕಿತ್ತರು. ಮುಸ್ಲಿಮ್ ಯೋಧರು ಶತ್ರುಗಳು ತೊರೆದು ಹೋದ ಸೊತ್ತು ಮತ್ತು ಆಯುಧಗಳು ಸಂಗ್ರಹಿಸ ತೊಡಗಿದರು. ಬೆಟ್ಟದ ಮೇಲಿದ್ದವರು ಇದನ್ನು ನೋಡಿದರು. ಅವರ ನಾಯಕ ತಡೆದರೂ ಕೆಲವು ಮಂದಿಯನ್ನು ಹೊರತುಪಡಿಸಿ ಉಳಿದವರಲ್ಲರೂ ಕೆಳಗಿಳಿದು ಬಂದರು.

ಬೆಟ್ಟದ ಮೇಲಿಂದ ಜನರು ಚದುರಿದ್ದು ಕಂದ ಖಾಲಿದ್ ಬಿನ್ ವಲೀದರ ನಾಯಕತ್ವದಲ್ಲಿದ್ದ ಅಶ್ವಪಡೆಗಳ ತಂಡವೊಂದು ಬೆಟ್ಟದ ಇಳಿಜಾರು ಪ್ರದೇಶದ ಮೂಲಕ ರಣರಂಗಕ್ಕೆ ಧಾವಿಸಿ ಬಂದು ಮುಸ್ಲಿಮರ ವಿರುದ್ಧ ಭೀಕರ ಆಕ್ರಮಣ ನಡೆಸಿತು. ಅನೀರಿಕ್ಷಿತ ಆಕ್ರಮಣದಿಂದ ದಿಕ್ಕೇ ತೋಚದಂತಾದ ಮುಸ್ಲಿಮ್ ಸೈನ್ಯವು ಚೆಲ್ಲಾಪಿಲ್ಲಿಯಾಗಿ ಓಡಿತು.

ಪ್ರವಾದಿ [] ಮತ್ತು ಕೆಲವು ಸಹಾಬಿಗಳು ಮಾತ್ರ ಕದಲದೆ ರಣರಂಗಕ್ಕೆ ಎದೆಯೊಡ್ಡಿ ನಿಂತರು. ಪ್ರವಾದಿಯವರು[] ಶತ್ರುಗಳು ಹೆಣೆದ ಒಂದು ಕುತಂತ್ರದ ಬಲೆಯೊಳಗೆ ಸಿಲುಕಿದರು. ಒಂದು ಬಾಣವು ಪ್ರವಾದಿ[] ಯುದ್ಧದ ಶಿರಾಸ್ತ್ರಾನಕ್ಕೆ ತಾಗಿತು. ಶಿರಾಸ್ತ್ರಾನದ ಮೊಳೆ ಪ್ರವಾದಿ[] ಕೆನ್ನೆಗೆ ಚಿಚ್ಚಿತು. ಸಹಾಗಳು ಪ್ರವಾದಿ[]ಯವರನ್ನು ಸುತ್ತುವರಿದು ಅವರನ್ನು ರಕ್ಷಿಸಿದರು. ಭಾರೀ ನಾಶ-ನಷ್ಟಗಳುಂಟಾದವು ಎಪ್ಪತ್ತು ಮಂದಿ ಹುತಾತ್ಮರಾದರು.

ಪ್ರವಾದಿ []ಯವರ ಚಿಕ್ಕಪ್ಪ ಹಂಝ [], ಮಿಸ್'ಅಬ್'ಬಿನ್ ಉಮೈರ್ [], ಹನ್'ಳತುಬಿನ್ ಅಮೀರ್ [] ಮೊದಲಾದ ಸಹಾಬಿ ಪ್ರಮುಖರು ಹುತಾತ್ಮರಾದರು. ಶತ್ರುಪಡೆಯ 23 ಮಂದಿ ಹತರಾದರು. ಶತ್ರುಗಳು ಅಭಿಮಾನದೊಂದಿಗೆ ಮರಳಿದರು. ಯುದ್ಧವು ನಾಯಕತ್ವವನ್ನು ನಿರ್ಲಕ್ಷಿಸುವುದು ಅಪಾಯಕರ ಎಂಬ ಪಾಠವನ್ನು ನಮಗೆ ನೀಡುತ್ತದೆ

No comments:

Post a Comment