Friday, September 23, 2016

ಪಥಭ್ರಷ್ಟ ನಂಭಿಕೆಗಳು


ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು: ಆದಮನ ಪುತ್ರನು ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ನಿರಾಕರಿಸುವುದು ಹೇಗೆಂದರೆ - ಆತ ನನ್ನನ್ನು ಮರಣಾನಂತರ ಖಂಡಿತ ಜೀವಂತ ಗೊಳಿಸಲಾರನು. ನನ್ನನ್ನು ಪ್ರಥಮ ಸಲ ಸೃಷ್ಟಿಸಿದಂತೆ ಪ್ರಥಮ ಸಲ ಸೃಷ್ಟಿಸುವುದು ಅವನನ್ನು ಜೀವಂತ ಗೊಳಿಸುವುದಕ್ಕಿಂತ ಸುಲಭವಲ್ಲ ಎನ್ನುವುದಾಗಿದೆ. ನನ್ನನ್ನು ಬಯ್ಯುವುದು  ಹೇಗೆಂದರೆ - ಅಲ್ಲಾಹನು ಮಗನನ್ನು ಹೊಂದಿದ್ದಾನೆ ಎನ್ನುವುದಾಗಿದೆ. ವಾಸ್ತವದಲ್ಲಿ ನಾನು ಏಕೈಕನು ನಿರಪೇಕ್ಷನೂ ಆಗಿರುವೆನು. ನನಗೆ ಯಾವ ಪುತ್ರನೂ ಇಲ್ಲ ಮತ್ತು ನಾನು ಯಾರ ಪುತ್ರನೂ ಅಲ್ಲ. ನನಗೆ ಸರಿಸಮಾನರೂ ಯಾರೂ ಇಲ್ಲ. ಇಬ್ನು ಅಬ್ಬಾಸ್ [ರ] ಅವರ ವರದಿಯಲ್ಲಿ ಈ ರೀತಿಯಿದೆ - ಅವನು ನನ್ನನ್ನು  ಬಯ್ಯುವುದು  ಹೇಗೆಂದರೆ - ನನಗೆ ಮಗನಿದ್ದಾನೆ ಎನ್ನುವುದಾಗಿದೆ. ನಾನು ಯಾರನ್ನಾದರೂ ನನ್ನ ಪತ್ನಿ ಅಥವಾ ಪುತ್ರನಾಗಿಸುವುದರಿಂದ ಪರಿಶುದ್ದನಾಗಿರುವೆನು. 
[ಬುಖಾರಿ]

No comments:

Post a Comment