ಅಬೂ
ತಾಲಿಬ್ ರ ನಿಧನದ ಸಮಯ ಬಂಧಾಗ ಪ್ರವಾದಿ [ಸ] ಅವರ ಬಳಿಗೆ ಹೋದರು. ಆಗ ಅವರ ಬಳಿ ಅಬೂಜಹಲ್ ಕೂಡಾ
ಇದ್ದ. ಪ್ರವಾದಿ [ಸ] ಹೇಳಿದರು - "ಚಿಕ್ಕಪ್ಪಾ, "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ) ಎಂದು
ಹೇಳಿರಿ. ಅದರಿಂದ ಅಲ್ಲಾಹನ ಸನ್ನಿಧಿಯಲ್ಲಿ ನನಗೆ ಮಾತುಕತೆ ನಡೆಸುವ ಅವಕಾಶ ಒದಗೀತು."
ಇದನ್ನು ಕೇಳಿ ಅಬೂಜಹಲ್ ಮತ್ತು ಅಬ್ದುಲ್ಲಾ ಬಿನ್ ಉಮಯ್ಯ ಹೀಗೆ ಹೇಳಿದರು - "ಅಬೂ ತಾಲಿಬರೇ, ನೀವು ಅಬ್ದುಲ್ ಮುತ್ತಲಿಬರ ಹಿರಿಯರ
ಧರ್ಮವನ್ನು ತೊರೆಯುವಿರಾ?"
ಅವರು ಇದೇ ರೀತಿ ತಮ್ಮ ಮಾತುಗಳಿಂದ
ಅಬೂತಾಲಿಬರನ್ನು ಕೆರಳಿಸುತ್ತಿದ್ದರು. ಅಬೂತಾಲಿಬ್ ಹೇಳಿದ ಕೊನೆಯ ಮಾತು ಹೀಗಿತ್ತು -
"ನಾನು ಅಬ್ದುಲ್ ಮುತ್ತಲಿಬ್ ರ ಹಾದಿಯಲ್ಲೇ ಸ್ಥಿರವಾಗಿರುವೆನು." ಪ್ರವಾದಿ [ಸ]
ಹೇಳಿದರು - "ನನ್ನನ್ನು ಅದರಿಂದ ತಡೆಯುವ ತನಕ ನಾನು ನಿಮ್ಮ ಕ್ಷಮೆಗಾಗಿ
ಪ್ರಾರ್ಥಿಸುತ್ತಿರುವೆನು." (ವರದಿ: ಹ. ಇಬ್ನು ಮುಸಯ್ಯಿಬ್ [ರ] ತಮ್ಮ ತಂದೆಯವರಿಂದ)
[ಬುಖಾರಿ]
No comments:
Post a Comment