ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಕಿರಿಯವನು ಹಿರಿಯವನಿಗೆ, ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
ಇನ್ನೊಂದು ವರದಿಯಲ್ಲಿ ಅವರು ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ವಾಹನದಲ್ಲಿರುವವನು ನಡೆಯುವವನಿಗೆ, ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
[ಸಹೀಹ್ ಬುಖಾರಿ, ಅಧ್ಯಾಯ ಅನುಮತಿ ಕೇಳುವುದು]
ಅಬ್ದುಲ್ಲಾ ಬಿನ್ ಅಮ್ರ್ [ರ] ಹೇಳುತ್ತಾರೆ - ಒಬ್ಬರು ಪ್ರವಾದಿಯವರಲ್ಲಿ ಕೇಳಿದರು - ಇಸ್ಲಾಮಿನಲ್ಲಿ ಹೆಚ್ಚು ಪ್ರಯೋಜನಕಾರಿಯಾದ ಕರ್ಮ ಯಾವುದು? ಪ್ರವಾದಿ [ಸ] ಹೇಳಿದರು - ಆಹಾರ ಉಣಿಸುವುದು ಮತ್ತು ನಿನ್ನ ಪರಿಚಿತರಿಗೂ ಅಪರಿಚಿತರಿಗೂ ಸಲಾಮ್ ಹೇಳುವುದು.
[ಸಹೀಹ್ ಬುಖಾರಿ, ಅಧ್ಯಾಯ ಅನುಮತಿ ಕೇಳುವುದು]
ನಿಸ್ಸಂದೇಹವಾಗಿಯೂ ಜನರ ಪೈಕಿ ಅಲ್ಲಾಹನಿಗೆ ನಿಕಟರಾಗಿರುವವರು "ಸಲಾಮ್'ನ್ನು ವ್ಯಾಪಕಗೊಳಿಸುವವರಾಗಿದ್ದಾರೆ.
[ಅಬೂ ದಾವೂದ್ (ಸಹೀಹ್)]
ಸಲಾಮ್'ನೊಂದಿಗೆ ತನ್ನ ಮನೆಯನ್ನು ಪ್ರವೇಶಿಸುವ ವ್ಯಕ್ತಿಯು ಅಲ್ಲಾಹನ ರಕ್ಷಣೆಯಲ್ಲಿರುವವನು.
[ಬುಖಾರಿ]
No comments:
Post a Comment