Thursday, September 15, 2016

ಮರೆವಿನ ಸುಜೂದ್

ನಮಾಝಿನ ಯಾವುದಾದರೂ ಪ್ರಮುಖ ಕರ್ಮ ಬಿಟ್ಟು ಹೋದರೆ ಅಥವಾ ಹೆಚ್ಚಾಗಿ ನಿರ್ವಹಿಸಿದರೆ ನಮಾಝಿನ ಕೊನೆಯ ಎರಡು ಸುಜೂದ್ ಮಾಡಬೇಕು. ಇದಕ್ಕೆ ಮರೆವಿನ ಸುಜೂದ್ ಎಂದು ಹೆಸರು. ನಮಾಝಿನ ಅವಿಭಾಜ್ಯ ಘಟಕಗಳು ಬಿಟ್ಟು ಬಿಟ್ಟಿದ್ದರೆ ಅವುಗಳನ್ನು ಮತ್ತೆ ನಿರ್ವಹಿಸಿದ ಬಳಿಕ ಮರೆವಿನ ಸುಜೂದ್ ಮಾಡಬೇಕು.

ಉದಾಹರಣೆಗೆ ಒಬ್ಬಾತ ಅಸರ್ ನಮಾಝ್ ಮೂರು ರಕಅತ್ ನಿರ್ವಹಿಸಿ ಸಲಾಮ್ ಹೇಳಿ ಸ್ವಲ್ಪ ವೇಳೆಯ ಬಳಿಕ ಆತನಿಗೆ ಒಂದು ರಕಅತ್ ಕಮ್ಮಿ ನಿರ್ವಹಿಸಿರುವುದು ನೆನಪಾದರೆ, ತಕ್ಷಣ ಆತ ಒಂದು ರಕಅತ್ ನಿರ್ವಹಿಸಿ ಕೊನೆಯ ಎರಡು ಸುಜೂದ್ ಮಾಡಬೇಕು.

No comments:

Post a Comment