Friday, September 16, 2016

ಪ್ರವಾದಿ ಮುಹಮ್ಮದ್ [ಸ] ಅನುಸರಿಸಿದರೆ ಅವರು ಅಲ್ಲಾಹನನ್ನು ಅನುಸರಿಸಿದರು

ಜಾಬೀರ್ ಬಿನ್ ಅಬ್ದುಲ್ಲಾ [] ಹೇಳುತ್ತಾರೆ - ಪ್ರವಾದಿ [] ಮಲಗಿರುವಾಗ ದೇವಚರರ ಒಂದು ತಂಡ ಬಂತು. ಅವರ ಪೈಕಿ ಕೆಲವು ದೇವಚರರು, ಅವರು ನಿದ್ರಿಸುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಕೆಲವು ದೇವಚರರು ಕಣ್ಣು ನಿದ್ರಿಸುತ್ತಿದೆ, ಹೃದಯ ಎಚ್ಚರಗೊಂಡಿದೆ ಎಂದು ಹೇಳಿದರು. ಅವರ ಪೈಕಿ ಕೆಲವರು ಹೇಳಿದರು - ನಿಮ್ಮ ಸಂಗಾತಿಗೆ ಒಂದು ಉದಾರಣೆಯನ್ನು ಹೇಳಿಕೊಡಿರಿ. ಕೆಲವರು, ಅವರು ನಿದ್ರಿಸುತ್ತಿದ್ದಾರೆ ಎಂದು ಹೇಳಿದಾಗ ಬೇರೆ ಕೆಲವರು-ಅವರು ಕಣ್ಣು ನಿದ್ರಿಸುತ್ತಿದೆ. ಹೃದಯ ಎಚ್ಚರಗೊಂಡಿದೆ ಎಂದು ಹೇಳಿದರು - ಅವರ ಉದಾಹರಣೆ ಹೀಗಿದೆ: ಒಬ್ಬರು ಒಂದು ಭವನ ನಿರ್ಮಿಸಿದರು. ತರುವಾಯ ಅಲ್ಲಿ ಒಂದು ಸತ್ಕಾರಕೂಟ ವೇರ್ಪಡಿಸಿದರು. ಜನರನ್ನು ಆಹ್ವಾನಿಸಲು ಜನ ಕಳಿಸಿದರು. ಆಹ್ವಾನ ಸ್ವೀಕರಿಸಿದವರು ಭವನದೊಳಗೆ ಹೋಗಿ ಊಟ ಮಾಡಿದರು. ಆಹ್ವಾನ ಸ್ವೀಕರಿಸಿದವರು ಅದರೊಳಗೆ ಪ್ರವೇಶಿಸಲಿಲ್ಲ. ಊಟವನ್ನೂ ಮಾಡಲಿಲ್ಲ. ಅವರ ಪೈಕಿ ಕೆಲವರು ಹೇಳಿದರು - ಉದಾಹರಣೆಯನ್ನು ನೀವು ಅವರಿಗೆ ವಿವರಿಸಿಕೊಡಿರಿ. ಅವರು ಅದನ್ನು ಚೆನ್ನಾಗಿ ಗ್ರಹಿಸಲಿ. ಆಗ ಅವರಲ್ಲಿ ಕೆಲವರು ಹೇಳಿದರು - ಅವರು ನಿದ್ರಿಸುತ್ತಿದ್ದಾರೆ. ಇನ್ನು ಕೆಲವು ದೇವಚರರು ಕಣ್ಣು ನಿದ್ರಿಸುತ್ತಿದೆ, ಹೃದಯ ಎಚ್ಚರಗೊಂಡಿದೆ. ಆಗ ಅವರು ಹೇಳಿದರು - ಭವನ ಸ್ವರ್ಗ ಸತ್ಕಾರಕೂಟಕ್ಕೆ ಆಹ್ವಾನಿಸಿದವರು ಪ್ರವಾದಿ ಮುಹಮ್ಮದ್ [] ಆಗಿದ್ದಾರೆ. ಪ್ರವಾದಿ ಮುಹಮ್ಮದ್ ರನ್ನು [] ಯಾರದರೂ ಅನುಸರಿಸಿದರೆ ಅವನು ಅಲ್ಲಾಹನನ್ನು ಅನುಸರಿಸಿದನು. ಪ್ರವಾದಿ ಮುಹಮ್ಮದ್ ರನ್ನು [] ಯಾರದರೂ ತಿರಸ್ಕರಿಸಿದರೆ ಅವನು ಅಲ್ಲಾಹನನ್ನು ತಿರಸ್ಕರಿಸಿದನು. ಅನುಸರಿಸುವವರನ್ನು ಮತ್ತು ತಿರಸ್ಕರಿಸುವವರನ್ನು ಪ್ರವಾದಿ ಮುಹಮ್ಮದ್ [] ಪ್ರತ್ಯೇಕಿಸಿದರು
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸುನ್ನತ್'ಗಳನ್ನು ಬಲವಾಗಿ ಹಿಡಿಯುವುದು]  

No comments:

Post a Comment