Thursday, September 15, 2016

ಪ್ರವಾದಿ ಮುಹಮ್ಮದ್ [ಸ] ಮತ್ತು ಖದೀಜಾ [ರ]ರವರ ವಿವಾಹ

ಪ್ರವಾದಿ []ಯವರ ಸದ್ಗುಣಗಳನ್ನು ಅರಿತಿದ್ದ ಕುರೈಶ್ ಗೋತ್ರದ ಖುವೈಲಿದ್ ಪುತ್ರಿ ಖದೀಜಾ []ರವರು, ಪ್ರವಾದಿ []ರವರನ್ನು ತಮ್ಮ ವ್ಯಾಪಾರದ ಸರಕುಗಳೊಂದಿಗೆ ಸಿರಿಯಾಕ್ಕೆ ಹೋಗುವಂತೆ ವಿನಂತಿಸಿದರು. ಪ್ರವಾದಿ[]ಯವರು ಖದೀಜಾರವರ ಆಹ್ವಾನವನ್ನು ಸ್ವೀಕರಿಸಿ ವ್ಯಾಪಾರದಲ್ಲಿ ಭಾರೀ ಲಾಭ ಸಂಪಾದಿಸಿದರು. ಖದೀಜಾರಿಗೆ ತುಂಬಾ ಸಂತೋಷವಾಯಿತು. ಮಾತ್ರವಲ್ಲದೆ, ಪ್ರವಾದಿ []ಯವರ ಗುಣಸ್ವಭಾವಗಳು ಕೂಡಾ ಖತೀಜಾ []ರನ್ನು ಆಕರ್ಷಿಸಿತು. ವ್ಯಾಪಾರದ ಪ್ರಯಾಣದಲ್ಲಿ ಪ್ರವಾದಿಯವರ ಜತೆಯಲ್ಲಿದ್ದ ಜದೀಜಾ []ರವರ ಸೇವಕ ಮೈಸರತ್ ಪ್ರಯಾಣದ ಪ್ರತಿಯೊಂದು ಘಟನೆಯನ್ನು ಖದೀಜಾ []ರವರಿಗೆ ವಿವರಿಸಿದರು. ಬುದ್ಧಿವಂತೆಯಾದ ಖದೀಜಾ [] ಮುಹಮ್ಮದ್ []ರಲ್ಲಿ ಒಂದು ಮಹಾ ವ್ಯಕ್ತಿತ್ವವಿದೆಯೆಂದು ಗುರುತಿಸಿದರು. ಆದರಿಂದ ಅವರನ್ನು ವಿವಾಹವಾಗಲು ಅಪೇಕ್ಷಿಸಿದರು. ತಮ್ಮ ಅಪೇಕ್ಷೆಯನ್ನು ಅವರು ಪ್ರವಾದಿ []ಯವರ ಚಿಕ್ಕಪ್ಪಂದಿರಿಗೆ ತಿಳಿಸಿದರು. ಅವರಿಗೂ ಸಂತೋಷವಾಯಿತು. ಹಾಗೆ ಪ್ರವಾದಿ []ಯವರ 25ನೇ ವರ್ಷ ಪ್ರಾಯದಲ್ಲಿ ಖದೀಜಾರೊಂದಿಗೆ ವಿವಾಹ ನಡೆಯಿತು. ಅಂದು ಖದೀಜಾ []ರಿಗೆ 40 ವರ್ಷ ಪ್ರಾಯವಾಗಿತ್ತು.

No comments:

Post a Comment