ಸುಳ್ಳು ಆಣೆ ಹಾಕುವುದು ಮಹಾಪಾಪವಾಗಿದೆ.
ಆಣೆ
ಹಾಕಬೇಕಾದ ಪರಿಸ್ಥಿತಿ ಬಂದೊದಗಿದರೆ
ಅಲ್ಲಾಹನನ್ನು ಮಾತ್ರ ಮುಂದಿಟ್ಟು ಕೊಂಡು ಆಣೆ ಹಾಕಬೇಕು.
ಒಬ್ಬರಿಗೆ ನಾವು ಹೇಳುವ ಕಾರ್ಯದಲ್ಲಿ ಸಂಶಯ ಉದ್ಭವಿಸಿದರೆ ಅದನ್ನು ನಿವಾರಿಸಲು ಆ ಕಾರ್ಯವನ್ನು ಖಚಿತವೆಂದು ಸಾಬೀತುಪಡಿಸುವಾಗ ಆಣೆ ಹಾಕುತ್ತಾರೆ. "ಅಲ್ಲಾಹನಾಣೆ ನಾನು ಹಾಗೆ ಹೇಳಲಿಲ್ಲ" ಇತ್ಯಾದಿಯಾಗಿ ಹಲವು ವಿಧದಲ್ಲಿ ಆಣೆ ಹಾಕುವುದು ನಾವು ಕೇಳುತ್ತಿದ್ದೇವೆಯಲ್ಲವೇ? ಇಂತಹ ಆಣೆ ಅಲ್ಲಾಹನನ್ನು ಮುಂದಿಟ್ಟುಕೊಂಡು ಮಾತ್ರ ಹಾಕಬೇಕು. ಬೇರೆ ಯಾರ ಮತ್ತು ಯಾವುದರ ಹೆಸರಲ್ಲಿಯೂ ಆಣೆ ಹಾಕಬಾರದು.
No comments:
Post a Comment