ನವ್ವಾಸ್ ಬಿನ್ ಸಮ್'ಆನ್ ಹೇಳುತ್ತಾರೆ; ಪ್ರವಾದಿ ಮಹಮ್ಮದ್ (ಸ) ಈ ರೀತಿ ಹೇಳಿರುವುದಾಗಿ ನಾನು ಕೇಳಿದ್ದೇನೆ. ಪ್ರತಿಯೊಂದು ಹೃದಯವೂ ರಹ್ಮಾನನ ಎರಡು ಬೆರಳುಗಳ ಮಧ್ಯೆ ಇದೆ. ಅವನು ಇಚ್ಛಿಸಿದರೆ ಅದನ್ನು ನೇರ(ಸನ್ಮಾಗ೯)ವಾಗಿರಿಸುತ್ತಾನೆ ಅಥವಾ ವಕ್ರ(ದುಮಾ೯ಗ೯)ಗೊಳಿಸುತ್ತಾನೆ. ಆದ್ದರಿಂದ ಪ್ರವಾದಿ ಮುಹಮ್ಮದ್ (ಸ) ಈ ದುಆ ಪಠಿಸುತ್ತಲಿದ್ದರು "ಯಾ ಮುಕಲ್ಲಿಬಲ್ ಕುಲೂಬಿ ಸಬ್ಬಿತ್ ಕುಲೂಬನಾ ಅಲಾ ದೀನಿಕ." ಓ ಹೃದಯವನ್ನು ಪಲ್ಲಟಗೊಳಿಸುವವನೇ ನಮ್ಮ ಹೃದಯವನ್ನು ನಿನ್ನ ಧಮ೯ದಲ್ಲಿ ಸ್ಥಿರಗೊಳಿಸು.
[ಸಹೀಹ್ ಹಾಕಿಮ್]
No comments:
Post a Comment