Thursday, September 15, 2016

ಅಬೂ ಬಕರ್ ಸಿದ್ದೀಖ್ [ರ]

ಪ್ರವಾದಿ []ಯವರ ಜನನದ ಎರಡು ವರ್ಷಗಳ ನಂತರ ಅಬೂ ಬಕರ್ [] ಜನಿಸಿದರು. ಇವರ ತಂದೆಯ ಹೆಸರು ಅಬೂ ಖುಹಾಫ, ತಾಯಿಯ ಹೆಸರು ಉಮ್ಮುಲ್ ಖೈರು ಎಂದಾಗಿತ್ತು. ಬಾಲ್ಯದಲ್ಲಿಯೇ ಪ್ರವಾದಿ []ಯವರ ಮಿತ್ರರಾಗಿದ್ದರು. ಜನರು ಕೂಡಾ ಅಬೂ ಬಕರ್ []ರವರನ್ನು ಪ್ರೀತಿಸುತ್ತಿದ್ದರು. ಪ್ರವಾದಿ []ಯವರ ಹೇಳಿದ್ದನ್ನೆಲ್ಲಾ ಸ್ವಲ್ಪವೂ ಸಂಶಯವಿಲ್ಲದೆ ವಿಶ್ವಾಸ ತಾಳಿದ್ದರಿಂದ "ಸೀದ್ದೀಖ್" ಎಂಬ ಬಿರುದು ಲಭಿಸಿತು. ಅವರು ತಮ್ಮ ಪುತ್ರಿ ಆಯಿಶಾ[]ನ್ನು ಪ್ರವಾದಿ []ಯವರಿಗೆ ವಿವಾಹಮಾಡಿ ಕೊಟ್ಟರು. ಪ್ರವಾದಿ []ಯವರ ಮದೀನಾದ ಜೀವನ ಕಾಲದಲ್ಲಿ  ಜತೆಯಲ್ಲಿ ಅಬೂ ಬಕರ್ [] ಕೂಡಾ ಇದ್ದರು. ಪ್ರವಾದಿ []ಯವರು ಕಾಯಿಲೆ ಪೀಡಿತರಾದಾಗ ಅವರು ಮಸೀದಿಯಲ್ಲಿ ನಮಾಝ್ ನೇತೃತ್ವ ವಹಿಸಿದ್ದರು.    

ವರ್ತಕರಾಗಿ ಜೀವಿಸುತ್ತಿದ್ದ ಅವರು ದೊಡ್ಡ ಶ್ರೀಮಂತರಾಗಿದ್ದರು. ಅವರು ತಮ್ಮ ಎಲ್ಲಾ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ವಿನಿಯೋಗಿಸಿದರು. ಅನೇಕ ಗುಲಾಮರನ್ನು ಹಣಕೊಟ್ಟು ಖರೀದಿಸಿ ಸ್ವತಂತ್ರಗೊಳಿಸಿದರು. ಅವರು ಕುರಾನ್ ನನ್ನು ಸುಶ್ರಾವ್ಯ ಶೈಲಿಯಲ್ಲಿ ಪಾಯಾಯಣ ಮಾಡುತ್ತಿದ್ದರು. ಅವರು ಕುರಾನ್ ಪಾರಾಯಣ ಮಾಡುವಾಗ ಅದರ ಅರ್ಥವನ್ನು ಅರಿತು ಅಳುತ್ತಿದ್ದರು. ಅದನ್ನು ಕೇಳಿ ಜನರು ಸುತ್ತ ಅಣೆನೆರೆಯುತ್ತಿದ್ದರು

ಪ್ರವಾದಿ []ಯವರ ಮರಣಾನಂತರ ಅವರು ಖಿಲಾಫತನ್ನು ವಹಿಸಿಕೊಂಡರು. ಅವರ ಆಡಳಿತ ಕಾಲದಲ್ಲಿ ಇಸ್ಲಾಮ್ ಪರ್ಷಿಯಾ ಮತ್ತು ರೋಮ್ ತನಕ ಪಸರಿಸಿತು. ಪ್ರವಾದಿ []ಯವರ ನಿಧನಾಂತರ ಧರ್ಮಭ್ರಷ್ಟರಾದ ಜನರನ್ನು ಮರಳಿ ಇಸ್ಲಾಮ್ ಗೆ ಕರೆತಂದರು. ಅವರು ಎರಡು ವರ್ಷ ಮೂರು ತಿಂಗಳು ಇಸ್ಲಾಮೀ ಜಗತನ್ನು ಆಳಿದರು. 63ನೇ ಪ್ರಾಯದಲ್ಲಿ ಮೃತಪಟ್ಟರು. ಪ್ರವಾದಿ []ಯರ ಕಬ್ರ್ ಸಮೀಪ ದಫನಗೊಳಿಸಲ್ಪಟ್ಟರು.  

No comments:

Post a Comment