ಇಬ್ನು ಅಬ್ಬಾಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಜನರ ಪೈಕಿ ಎಲ್ಲರಿಗಿಂತಲೂ ದೊಡ್ಡ ಉದಾರಿಯಾಗಿದ್ದರು. ಅವರ ದಾನಶೂರತೆಯು ರಮಝಾನ್ ನಲ್ಲಿ ಜಿಬ್ರೀಲ್ ರನ್ನು ಭೇಟಿಯಾಗುವಾಗ ಅತೀ ಹೆಚ್ಚಾಗಿರುತಿತ್ತು. ರಮಝಾನ್ ನ ಎಲ್ಲಾ ರಾತ್ರಿಗಳಲ್ಲೂ ಜಿಬ್ರೀಲ್ [ಅ] ಪ್ರವಾದಿಯವರನ್ನು [ಸ] ಭೇಟಿಯಾಗಿ ಅವರು ಜತೆಗೂಡಿ ಕುರಾನ್ ಪಾರಾಯಣ ಗೈಯ್ಯುತ್ತಿದ್ದರು. ಒಳಿತಿನ ಕಾರ್ಯಗಳಲ್ಲಿ ಪ್ರವಾದಿ [ಸ] ಬಿರುಗಾಳಿಗಿಂತಲೂ ಹೆಚ್ಚು ಉದಾರಿಯಾಗಿದ್ದರು.
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿ ಮುಹಮ್ಮದ್ ರಿಗೆ [ಸ] ದಿವ್ಯವಾಣೆ ಅವತರಣದ ಆರಂಭ]
No comments:
Post a Comment