Friday, May 11, 2018

ಗುಲಾಮರೊಂದಿಗೆ ಸದ್ವರ್ತನೆ



ಹ. ಅಬೂ ಮಸ್‌ಊದ್ ಬದ್ರೀ ಹೇಳುತ್ತಾರೆ - ನಾನು ನನ್ನ ಗುಲಾಮನೊಬ್ಬನಿಗೆ ಛಡಿಯೇಟು ಬಾರಿಸುತ್ತಿದ್ದೆ. ಆಗ ನನ್ನ ಹಿಂದಿನಿಂದ ದೂರದಲ್ಲಿ ಯಾರೋ ಕೂಗಿ ಹೇಳುತ್ತಿದ್ದರು - "ಓ ಅಬೂ ಮಸ್‌ಊದ್ ಜಾಗ್ರತೆ! ಅದು ಯಾರ ಸ್ವರವೆಂದು ಕೋಪದಿಂದ ನನಗೆ ತಿಳಿಯಲಿಲ್ಲ. ಕೂಗಿ ಕರೆಯುವವರು ಹತ್ತಿರ ಬಂದಾಗ, ಅದು ಪ್ರವಾದಿಯವರೆಂದು [ಸ] ತಿಳಿಯಿತು. ಅವರು ಹೀಗೆ ಹೇಳುತ್ತಿದ್ದರು - ಅಬೂ ಮಸ್‌ಊದ್! ಈ ಗುಲಾಮನ ಮೇಲೆ ನಿಮಗೆಷ್ಟು ಅಧಿಕಾರವಿದೆಯೋ ಅದಕ್ಕಿಂತ ಬಹಳಷ್ಟು ಹೆಚ್ಚು ಅಧಿಕಾರ ಅಲ್ಲಾಹನಿಗೆ ನಿಮ್ಮ ಮೇಲಿದೆಯೆಂಬುದು ನೆನಪಿರಲಿ. (ಇಷ್ಟೊಂದು ನಿಷ್ಕರುಣೆಯಿಂದ ಅವನಿಗೇಕೆ ಹೊಡೆಯುತ್ತಿರುವಿರಿ. ನಿಮಗೆ ಅಲ್ಲಾಹನ ಭಯವಿಲ್ಲವೇ?)ನಾನು ಹೇಳಿದೆ - ಅಲ್ಲಾಹನ ಸಂದೇಶವಾಹಕರೇ! ಇನ್ನು ಮುಂದೆ ನಾನು ಯಾವ ಗುಲಾಮನನ್ನೂ ಹೊಡೆಯಲಾರೆ. ಇನ್ನೊಂದು ಹದೀಸ್‌ನಲ್ಲಿ ಹೀಗಿದೆ - ಅಬೂ ಮಸ್‌ಊದ್ ಹೇಳಿದರು: ಅಲ್ಲಾಹನ ಸಂಪ್ರೀತಿಗೊಸ್ಕರ ಈ ಗುಲಾಮನನ್ನು ಸ್ವತಂತ್ರಗೊಳಿಸಿದ್ದೇನೆ. 
[ಮುಸ್ಲಿಮ್, ಅಬೂ ದಾವೂದ್, ತಿರ್ಮಿದಿ]

No comments:

Post a Comment