ಅಮ್ರ್ ಬಿನ್ ಆಸ್ [ರ] ಹೇಳುತ್ತಾರೆ - ಅಲ್ಲಾಹನು ನನ್ನ ಹೃದಯದಲ್ಲಿ
ಇಸ್ಲಾಮ್ ಸ್ವೀಕರಿಸುವ ಭಾವನೆಯನ್ನುಂಟು ಮಾಡಿದಾಗ ನಾನು ಪ್ರವಾದಿಯವರ [ಸ] ಬಳಿಗೆ ಹೋಗಿ, ತಾವು ತಮ್ಮ
ಕೈಯನ್ನು ಮುಂದೆ ಚಾಚಿರಿ, ನಾನು ತಮ್ಮ ಕೈಯಲ್ಲಿ ಬೈಅತ್ (ಕರಾರು) ಮಾಡುತ್ತೇನೆ ಎಂದೆ. (ಅರ್ಥಾತ್
ಇನ್ನು ಏಕೈಕನಾದ ಅಲ್ಲಾಹನ ದಾಸ್ಯ-ಆರಾಧನೆಯನ್ನು ಮಾಡುವೆನೆಂದು ಕರಾರು ಮಾಡುತ್ತೇನೆ). ಪ್ರವಾದಿಯವರು
[ಸ] ತಮ್ಮ ಕೈಯನ್ನು ಮುಂದೆ ಚಾಚಿದಾಗ ನಾನು ನನ್ನ ಕೈಯನ್ನು ಹಿಂದಕ್ಕೆಳೆದೆ. ಪ್ರವಾದಿ [ಸ] ಕೇಳಿದರು
- ಒ ಅಮ್ರ್! ನೀವೇಕೆ ನಿಮ್ಮ ಕೈಯನ್ನು ಹಿಂದಕ್ಕೆಳೆದಿರಿ? ನಾನು ಹೇಳಿದೆ - ನಾನೊಂದು ಶರತ್ತು ಹಾಕ
ಬಯಸುತ್ತೇನೆ. ಅದೇನೆಂದು ಪ್ರವಾದಿ [ಸ] ಕೇಳಿದರು. ನಾನು ಹೇಳಿದೆ - ನನ್ನ ಗತಪಾಪಗಳೆಲ್ಲ ಕ್ಷಮಿಸಲ್ಪಡ
ಬೇಕೆಂಬುದೇ ನನ್ನ ಶರತ್ತು. ಆಗ ಪ್ರವಾದಿ [ಸ] ಹೇಳಿದರು - "ಓ ಅಮ್ರ್! ಒಬ್ಬನು ಇಸ್ಲಾಮ್ ಸ್ವೀಕರಿಸುವುದಕ್ಕಿಂತ
ಮುಂಚಿನ ಎಲ್ಲ ಪಾಪಗಳನ್ನು ಇಸ್ಲಾಮ್ ಅಳಿಸುತ್ತದೆಂದು ನಿಮಗೆ ತಿಳಿಯದೆ?"
[ಬುಖಾರಿ]
No comments:
Post a Comment