Thursday, May 10, 2018

ನಮಾಝ್‌ನ ಆಧಿಕ್ಯ


ರಬೀಅ ಬಿನ್ ಕಅಬ್ (ಪ್ರವಾದಿಯವರ [ಸ] ಸೇವಕ) ಹೇಳುತ್ತಾರೆ - ನಾನು ರಾತ್ರಿ ಹೊತ್ತು ಪ್ರವಾದಿವರ್ಯರ [ಸ] ಜೊತೆಯಲ್ಲಿರುತ್ತಿದ್ದೆ. ಅವರಿಗೆ ವೂಝೂವಿಗೆ ನೀರು ತರುತ್ತಿದ್ದೆ. ಮತ್ತಿತರ ಅಗತ್ಯದ ವ್ಯವಸ್ಥೆಗಳನ್ನು ಮಾಡುತ್ತಿದ್ದೆ. ಒಂದು ದಿನ ಅವರು, ನೀನೇನಾದರೂ ಕೇಳು ಎಂದರು. ನಾನು ಹೇಳಿದೆ - ನಾನು ತಮ್ಮೊಂದಿಗೆ ಸ್ವರ್ಗದಲ್ಲಿ ಬಯಸುತ್ತೇನೆ. ಪ್ರವಾದಿ [ಸ] ಹೇಳಿದರು - ಇನ್ನೂ ಏನಾದರೂ ಕೇಳು. ನಾನು ಹೇಳೀದೆ, ಇನ್ನೇನೂ ಬೇಡ. ಆಗ ಪ್ರವಾದಿ [ಸ] ಹೇಳಿದರು - ನೀನು ಸ್ವರ್ಗದಲ್ಲಿ ನನ್ನೊಂದಿಗೆ ಇರ ಬಯಸುವೆಯಾದರೆ ಹೆಚ್ಚು ಹೆಚ್ಚು ನಮಾಝ್ ಮಾಡುವ ಮೂಲಕ ನನಗೆ ಸಹಾಯ ಮಾಡು. 
[ಮುಸ್ಲಿಮ್]

No comments:

Post a Comment