Friday, May 11, 2018

ಹಲಾಲ್ ತುತ್ತು


. ಆಯಿಶಾ [] ಹೇಳುತ್ತಾರೆ - ನನ್ನ ತಂದೆ . ಅಬೂ ಬಕರ್ರಿಗೆ [] ಒಬ್ಬ ಗುಲಾಮನಿದ್ದ. ಅವನು ಸಂಪಾದನೆ ಮಾಡಿ ಒಂದು ಮೊತ್ತವನು ತಂದು ಅವರಿಗೆ ಕೊಡುತ್ತಿದ್ದನು. ಅದನ್ನು ಅವರು ಖರ್ಚು ಮಾಡುತ್ತಿದ್ದರು. ಒಂದು ದಿನ ಅವನು ತಂದೆಯವರಿಗೆ ಏನೋ ತಿನ್ನುವ ವಸ್ತುವೊಂದನ್ನು ತಂದು ಕೊಟ್ಟನು. ಅವರು ಅದನ್ನು ತಿಂದರು. ತಿಂದಾದ ಬಳಿಕ ಗುಲಾಮನು ತಂದೆಯವರೊಂದಿಗೆ, ನೀವು ತಿಂದ  ವಸ್ತು ಏನೆಂದು ತಿಳಿದಿದೆಯೇ ಎಂದು ಕೇಳಿದನು. ಅವರು, ನಿನಗೆ ಅದು ಎಲ್ಲಿಂದ ಸಿಕ್ಕಿತು, ಹೇಳು ಎಂದರು. ಆಗ ಅವನು ಹೀಗೆಂದನು - ನಾನು ಇಸ್ಲಾಮ್ ಸ್ವೀಕರಿಸುವುದಕ್ಕೆ ಮುಂಚೆ ಜ್ಯೋತಿಷ್ಯ (ವಾಸ್ತದಲ್ಲಿ ನಿನ್ನ ವಿದಿಯಲ್ಲಿ ಹೀಗೆ ಬರೆದಿದೆಯೆಂದು) ಹೇಳಿದೆ. ನಾನು ಅವನನ್ನು ಮೋಸಗೊಳಿಸಿದ್ದೆ. ಈಗ ಅವನು ನನಗೆ ಸಿಕ್ಕಿ ನನ್ನ ಪ್ರತಿಫಲ ನನಗೆ ನೀಡಿದನು. ಅದನ್ನೇ ನೀವು ತಿಂದಿರಿ. ಇದನ್ನು ಕೇಳಿದ ಕೂಡಲೇ . ಅಬೂ ಬಕರ್ರು [] ಗಂಟಲಿಗೆ ಕೈ ಹಾಕಿ ಹೊಟ್ಟೆಯಲ್ಲಿದ್ದುದನ್ನೆಲ್ಲ ವಾಂತಿ ಮಾಡಿಬಿಟ್ಟರು
[ಬುಖಾರಿ]

No comments:

Post a Comment