Saturday, May 12, 2018

ಅಲ್ಲಾಹನ ಸಂಪ್ರೀತಿಯೇ ಪರಮ ಗುರಿ


. ಅಮ್ರ್ ಬಿನ್ ಆಸ್ [] ಹೇಳುತ್ತಾರೆ - ಪ್ರವಾದಿಯವರು [], ನಾನು ಶಸ್ತ್ರಾಸ್ತ್ರದೊಂದಿಗೆ ಯುದ್ಧ ಕವಚ ಹಾಕಿ ಅವರ ಸನ್ನಿಧಿಗೆ ಹೋಗಬೇಕೆಂದು ನನಗೆ ಕರೆ ಕಳಿಸಿದರು. ನಾನು ಶಸ್ತ್ರಸಜ್ಜಿತನಾಗಿ ಅವರ ಬಳಿಗೆ ಹೋದಾಗ ಅವರು ವೂಝೂ ಮಾಡುತ್ತಿದ್ದರು. ಪ್ರವಾದಿ [] ಹೇಳೀದರು - ನಾನು ನಿಮ್ಮನ್ನು ಒಂದು ಸೇನಾ ಕಾರ್ಯಾಚರಣೆಗೆ ಕಳಿಸುತ್ತಿದ್ದೇನೆ. ಕಾರ್ಯಚರಣೆಯಿಂದ ಸುರಕ್ಷಿತವಾಗಿ ಅಲ್ಲಾಹನು ನಿಮ್ಮನ್ನು ಮರಳಿಸುವನು. ನೀವು ಸಮರಾರ್ಜಿತದೊಂದಿಗೆ ಮರಳಿ ಬರುವಿರಿ. ಸಮರಾರ್ಜಿತದ ಒಂದು ಮೊತ್ತವನ್ನು ನಾನು ನಿಮಗೆ ಪುರಸ್ಕಾರದ ರೂಪದಲ್ಲಿ ನೀಡುವೆನು. ಆಗ ನಾನು ಹೇಳಿದೆ - ಅಲ್ಲಾಹನ ಸಂದೇಶವಾಹಕರೇ! ಸಂಪತ್ತು ಗಳಿಸಲಿಕ್ಕಾಗಿ ನಾನು ಹಿಜ್ರತ್ ಮಾಡಿರಲಿಲ್ಲ. ನಾನಂತೂ ಅಲ್ಲಾಹ್ ಮತ್ತು ಆತನ ಪ್ರವಾದಿವರ್ಯರಿಗಾಗಿ [] ಹಿಜ್ರತ್ ಮಾಡಿದೆ. ಪ್ರವಾದಿ [] ಹೇಳಿದರು - ಒಳ್ಳೆಯ ಸೊತ್ತು ಉತ್ತಮ ವ್ಯಕ್ತಿಗೆ ಅತ್ಯುತ್ತಮ ಸೊತ್ತಾಗಿದೆ
[ಮಿಸ್ಕಾತ್]

No comments:

Post a Comment