Friday, May 11, 2018

ಸಮಾಜಿಕ ವ್ಯವಹಾರಗಳು


ಇಬ್ನು ಉಮರ್ [] ಕುರಿತು ಅಬ್ದುಲ್ಲಾ ಬಿನ್ ದೀನಾರ್ ಹೇಳುತ್ತಾರೆ - ಅವರು ಹಜ್ಜ್ ಯಾತ್ರೆಗೆ ಹೋಗುತ್ತಿದ್ದಾಗ ಮಕ್ಕಾದ ದಾರಿಯಲ್ಲಿ ಗ್ರಾಮೀಣ ಅರಬೆನೊಬ್ಬನು ಅವರನ್ನು ಭೇಟಿಯಾದನು. ಅಬ್ದುಲ್ಲಾ ಬಿನ್ ಉಮರ್ [] ವ್ಯಕ್ತಿಗೆ ಸಲಾಮ್ ಹೇಳಿದರು. ಅವರು ಪ್ರಾಯಾಣೆಸುತ್ತಿದ್ದ ಅವರ ಹೇಸರುಗತ್ತೆಯನ್ನು ಅವನಿಗೆ ನೀಡಿದರು. ತನ್ನ ತಲೆಯ ಪೇಟೆ ಬಿಚ್ಚಿ ಅವನಿಗೆ ತೊಡಿಸಿದರು. ಆಗ ನಾನು ಹೇಳಿದೆ - ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ. ಗ್ರಾಮೀಣರಾದ ಮಂದಿಗೆ ಸ್ವಲ್ಪ ಕೊಟ್ಟರೂ ಸಂತೃಪ್ತರಾಗುತ್ತಾರೆ. (ಇಷ್ಟು ಹೆಚ್ಚು ಕೊಡುವ ಅಗತ್ಯವಿರಲಿಲ್ಲ). ಆಗ ಅವರು ಹೇಳಿದರು - ಇವನ ತಂದೆ ನನ್ನ ತಂದೆ . ಉಮರ್ [] ಸ್ನೇಹಿತರಾಗಿದ್ದರು. ಪ್ರವಾದಿ [] ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ - ಮಗನು ತನ್ನ ತಂದೆಯ ಸ್ನೇಹಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದು ಅತಿ ದೊಡ್ಡ ಪುಣ್ಯವಾಗಿದೆ.  
[ಮುಸ್ಲಿಮ್]

No comments:

Post a Comment