ಹಝ್ರತ್ ಅಬೂ ಹುರೈರಾ [ರ] ವರದಿ ಮಾಡುತ್ತಾರೆ, ಪ್ರವಾದಿ ಮುಹಮ್ಮದ್ [ಸ] ಹೇಳಿದರು. ಯಾರಾದರೂ ಒಬ್ಬ ವ್ಯಕ್ತಿ ಈ ಲೋಕದಲ್ಲಿ ಇನ್ನೊಬ್ಬ ವ್ಯಕ್ತಿಯ ಐಬ್ (ನ್ಯೂನತೆ, ಕೊರತೆ, ದೋಷ, ಹುಳುಕು, ದುರ್ಗುಣ)ವನ್ನು ಮರೆಮಾಚಿದರೆ ಅಲ್ಲಾಹನು ಅಂತಿಮ ದಿನದಲ್ಲಿ ಅವನ ಐಬ್'ನ್ನು ಮರೆಮಾಚುವನು.
[ಮುಸ್ಲಿಮ್]
ಹಝ್ರತ್ ಅಬೂ ಹುರೈರಾ [ರ] ವರದಿ. ಪ್ರವಾದಿ ಮುಹಮ್ಮದ್ [ಸ] ಹೇಳಿದರು. ಯಾರಾದರೂ ಒಬ್ಬ ವ್ಯಕ್ತಿ ಯಾವುದಾದರೂ ಮುಸಲ್ಮಾನನ ಲೌಕಿಕವಾದ ಯಾವುದಾದರೂ ಸಮಸ್ಯೆಯನ್ನು ನಿವಾರಿಸಿದರೆ ಅಲ್ಲಾಹು ಆತನ ಪ್ರಾರತ್ರಿಕ ಲೋಕದ ಸಮಸ್ಯೆಗಳಲ್ಲಿ ಒಂದನ್ನು ನಿವಾರಿಸಿ ಬಿಡುತ್ತಾನೆ. ಯಾರು ಒಬ್ಬ ಮುಸಲ್ಮಾನನೊಂದಿಗೆ, ಈ ಲೋಕದಲ್ಲಿ ಸೌಮ್ಯವಾಗಿ ನಡೆದುಕೊಳ್ಳುವನು. ಯಾರೂ ಈ ಲೋಕದಲ್ಲಿ ಓರ್ವ ಮುಸಲ್ಮಾನನ ಕುಂದು-ಕೊರತೆಯನ್ನು ಅಡಗಿಸುವನೋ, ಅಲ್ಲಾಹು ಈ ಲೋಕ ಮತ್ತು ಪರಲೋಕದಲ್ಲಿ ಆತನ ಕುಂದು-ಕೊರತೆಗಳ ಮೇಲೆ ಪರದೆ ಹಾಕುವನು. ಎಲ್ಲಿಯ ತನಕ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ನೆರವಿನಲ್ಲಿ ತೊಡಗಿರುತ್ತಾನೋ ಅಲ್ಲಿಯ ತನಕ ಅಲ್ಲಾಹು ಆತನ ನೆರವಿಗೆ ನಿಂತಿರುತ್ತಾನೆ.
[ಮುಸ್ಲಿಮ್]
ಹಝ್ರತ್ ಅಬ್ದುಲ್ಲಾ ಬಿನ್ ಉಮರ್ [ರ]ರಿಂದ ವರದಿ, ಪ್ರವಾದಿ [ಸ]ಹೇಳಿದರು, ಮುಸ್ಲಿಮರು ಪರಸ್ಪರ ಸಹೋದರರಾಗಿದ್ದಾರೆ. ಅವರು ಪರಸ್ಪರರ ಮೇಲೆ ಅತಿಕ್ರಮವೆಸಗುವುದಿಲ್ಲ. ಮಾತ್ರವಲ್ಲದೆ ಅವರು ಒಬ್ಬರು ಮತ್ತೊಬ್ಬನನ್ನು ಅತಿಕ್ರಮಿಯ ವಶಕ್ಕೆ ಒಪ್ಪಿಸವುದೂ ಇಲ್ಲ. ಒಬ್ಬ ಮುಸ್ಲಿಮ್ ತನ್ನ ಸಹೋದರನ ಅವಶ್ಯಕತೆಯನ್ನು ಪೂರೈಸಲು ಪರಿಶ್ರಮಿಸುವಷ್ಟು ಕಾಲ ಅಲ್ಲಾಹನು ಅವನ ಸಂಕಷ್ಟವನ್ನು ನಿವಾಸಿದರೆ ಅಲ್ಲಾಹನು ಪರಲೋಕದಲ್ಲಿ ಅವನ ಸಂಕಷ್ಟವನ್ನು ನಿವಾರಿಸುವನು. ಒಬ್ಬನು ಮತ್ತೊಬ್ಬ ಮುಸ್ಲಿಮ್ ಸಹೋದರನ ನ್ಯೂನತೆಯನ್ನು ಮರೆಮಾಚಿದರೆ ಅಲ್ಲಾಹನು ಪರಲೋಕದಲ್ಲಿ ಅವನ ನ್ಯೂನತೆಯನ್ನು ಮರೆಮಾಚುವನು.
[ತಬ್ರಾನಿ]
No comments:
Post a Comment