ಅಬೂ ಕತಾದ [ರ] ತನ್ನ ಒಬ್ಬ ಸಾಲಗಾರನಿಗೆ ಕರೆ ಕಳಿಸಿದಾಗ ಅವನು ಎಲ್ಲೋ
ಅಡಗಿ ಬಿಟ್ಟನು. ಅನಂತರ ಅವರಿಗೆ ಅವನು ಸಿಕ್ಕಿದನು. ಅವರು ತನ್ನ ಸಾಲ ಮರು ಪಾವತಿ ಮಾಡುವಂತೆ ಕೇಳಿ
ಕೊಂಡಾಗ - ಅವನು, ಕೈಯಲ್ಲಿ ಚಿಕ್ಕಾಸೂ ಇಲ್ಲ, ಸಾಲ ಮರು ಪಾವತಿ ಮಾಡುವ ಸ್ಥಿತಿಯಲ್ಲಿ ನಾನಿಲ್ಲವೆಂದನು.
ಅವರು ಕೇಳಿದರು - ಅಲ್ಲಾಹನಾಣೆಗೂ ನೀನು ಮರು ಪಾವತಿ ಮಾಡುವ ಸ್ಥಿತಿಯಲ್ಲಿಲ್ಲವೇ? ಅವನು ಹೇಳಿದನು
- ಅಲ್ಲಾಹನಾಣೆ! ನಾನು ಮರು ಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಆಗ ಅಬೂ ಕತಾದ [ರ] ಹೀಗೆಂದರು - ಯಾರಿಗಾದರೂ
ನಿರ್ಣಾಯಕ ದಿನದಂದು ಎಲ್ಲ ಚಿಂತೆಯಿಂದ ಮುಕ್ತಿ ದೊರಯಬೇಕೆಂಬ ಆಸೆಯಿದ್ದರೆ ಅವನು ಬಡ ಅಸಹಾಯಕ ಸಾಲಗಾರನಿಗೆ
ಇನ್ನಷ್ಟು ಅವಧಿ ನೀಡಲಿ ಅಥವಾ ಸಾಲವನ್ನು ಮನ್ನಾ ಮಾಡಲಿ ಎಂದು ಪ್ರವಾದಿ [ಸ] ಹೇಳಿರುವುದಾಗಿ ಕೇಳಿದ್ದೇನೆ.
[ಮುಸ್ಲಿಮ್]
No comments:
Post a Comment